VIDEO: ವಿಶ್ವಕಪ್​ನಲ್ಲಿ ಹ್ಯಾಟ್ರಿಕ್ ಪಡೆದ ಪ್ರಥಮ ಬೌಲರ್​ ನಮ್ಮ ಭಾರತೀಯನೇ!

ನವದೆಹಲಿ: ಕ್ರಿಕೆಟ್​ ಲೋಕದಲ್ಲಿ ಭಾರತ ಹಲವು ಪ್ರಥಮಗಳನ್ನು ತನ್ನ ಬತ್ತಳಿಕೆ ಸೇರಿಸಿಕೊಂಡಿದೆ. ಇದಕ್ಕೆಲ್ಲಾ ಕಾರಣ ಹಿರಿಯ ಆಟಗಾರರ ಬುನಾದಿ ಎಂದು ಹೇಳಿದರೆ ತಪ್ಪಾಗಲಾರದು.

ಮೊದಲ ಬಾರಿಗೆ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಕೀರ್ತಿಯು ನಮ್ಮ ಭಾರತಕ್ಕೆ ಸೇರಿದೆ. ಬಹಳ ಹಿಂದೆಯೇ ನಡೆದ ಅಚ್ಚರಿಯೇನೆಂದರೆ ವಿಶ್ವಕಪ್​ ಒಂದರಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್​ ವಿಕೆಟ್​ ಪಡೆದ ಕೀರ್ತಿಯನ್ನು ನಮ್ಮ ಭಾರತೀಯನೇ ಹೊಂದಿದ್ದಾನೆ ಎಂಬುದು ಎಷ್ಟೋ ಯುವಕರಿಗೆ ಗೊತ್ತಿರಲಿಕ್ಕಿಲ್ಲ.

ಹೌದು. ಭಾರತದ ವೇಗಿ ಚೇತನ್​ ಶರ್ಮಾ ಅವರು ಅಕ್ಟೋಬರ್​ 31, 1987ರಲ್ಲಿ ನಡೆದ ವಿಶ್ವಕಪ್​ ಟೂರ್ನಿಯಲ್ಲಿ ಎದುರಾಳಿ ನ್ಯೂಜಿಲೆಂಡ್​ ವಿರುದ್ಧ ಹ್ಯಾಟ್ರಿಕ್​ ವಿಕೆಟ್​ ಪಡೆಯುವ ಮೂಲಕ ವಿಶ್ವಕಪ್​ನಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್​ ವಿಕೆಟ್​ ಪಡೆದ ಆಟಗಾರ ಎಂಬ ಕೀರ್ತಿಯನ್ನು ಗಳಿಸಿದರು. ಅಲ್ಲದೆ, ಹ್ಯಾಟ್ರಿಕ್​ ವಿಕೆಟ್​ ಪಡೆದ ಭಾರತ ಪ್ರಥಮ ಆಟಗಾರನೆಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಶರ್ಮಾ ಅವರು 23 ಟೆಸ್ಟ್​ ಹಾಗೂ 65 ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *