ಹಾವು ಕಚ್ಚಿದ ಬಳಿಕ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ; First Aid ಎಂದು ಮಾಡುವ ವಿಧಾನ ಪ್ರಾಣಕ್ಕೆ ಸಂಚಕಾರ

blank

ಸಾಮಾನ್ಯವಾಗಿ ಹಾವು ಕಚ್ಚಿದ ಬಳಿಕ ಸುತ್ತಮುತ್ತ ಇರುವ ಜನರು ಪ್ರಥಮ ಚಿಕಿತ್ಸೆ(First Aid) ಎಂದು ಹಲವು ವಿಧಾನಗಳನ್ನು ಅನುಸರಿಸುತ್ತಾರೆ. ಅವರ ಚಿಂತನೆಯೂ ಒಳ್ಳೆಯದ್ದೇ ಅಗಿದ್ದರೂ ಅದು ಪರಿಣಾಮ ಮಾತ್ರ ಅಪಾಯಕಾರಿಯಾಗಿರುತ್ತದೆ. ನಮಗೆ ತಿಳಿಯದಲೇ ನಾವು ಮತ್ತೊಬ್ಬರ ಪ್ರಾಣಕ್ಕೆ ಅಪತ್ತು ತಂದೊಡ್ಡುತ್ತೇವೆ. ಎಲ್ಲರೂ ತಿಳಿದುಕೊಳ್ಳಲೇಬೇಕಾದ ಉಪಯುಕ್ತ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಇದನ್ನು ಓದಿ: ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಆರ್​ಜೆ ರ್ಯಾಪಿಡ್​ ರಶ್ಮಿ ಅವರು ನಡೆಸಿಕೊಡುವ ಪಾಡ್​ಕಾಸ್ಟ್​ನಲ್ಲಿ ಪ್ರಾಣಿಪ್ರಿಯ ಸಂಜೀವ್​ ಅವರು ಹಾವು ಕಚ್ಚಿದಾಗ ನಾವು ಮಾಡುವ ಪ್ರಥಮ ಚಿಕಿತ್ಸೆಯೇ ಅಪಾಯವನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ. ಇದು ಬಹಳ ಪ್ರಮುಖ ವಿಚಾರವಾಗಿದೆ. ಹಾವು ಕಚ್ಚಿದಾಗ ಜನರು ಈ ತಪ್ಪುಗಳನ್ನು ಗೊತ್ತಿಲ್ಲದೆ ಮಾಡುತ್ತಾರೆ ಎಂದ ಹೇಳಿದ್ದಾರೆ.

ಹಾವು ಕಚ್ಚಿದ ತಕ್ಷಣ ಬ್ಲೆಡ್​ ತೆಗೆದುಕೊಂಡು ಕಟ್​​ ಮಾಡುತ್ತಾರೆ. ಇದರಿಂದ ವಿಷ ಹೊರಬರುತ್ತದೆ ಎಂಬುದು ಅವರ ಅಭಿಪ್ರಾಯವಾಗಿರುತ್ತದೆ. ಈಗಾಗುತ್ತದೆ ಎಂಬುದು ಅಸಾಧ್ಯ ಎನ್ನುತ್ತಾರೆ ಸಂಜೀವ್​​. ಉದಾಹರಣೆಯೊಂದಿಗೆ ವಿವರಿಸಿದ ಅವರು ಒಂದು ಗ್ಲಾಸ್​ ನೀರಿಗೆ ಒಂದು ಡ್ರಾಪ್​ ಇಂಕ್​ ಹಾಕುತ್ತೇವೆ. ನೀರಿನಿಂದ ಇಂಕ್​ ಅನ್ನು ಬೇರ್ಪಡಿಸಲು ಸಾಧ್ಯವಾಗುತ್ತದೆಯೇ. ಅದೇ ರೀತಿ ರಕ್ತಕ್ಕೆ ಸೇರಿದ ವಿಷವನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಹಾವು ಕಚ್ಚಿದೆ ಎಂದು ಬ್ಲೆಡ್​ನಿಂದ ಕಟ್​​ ಮಾಡಬೇಡಿ.

ಹಾವು ಕಚ್ಚಿದ ಪ್ರದೇಶದ ಮೇಲ್ಭಾಗದಲ್ಲಿ ಬಟ್ಟೆ ಅಥವಾ ದಾರದಿಂದ ಗಟ್ಟಿಯಾಗಿ ಕಟ್ಟುತ್ತಾರೆ. ಇದರಷ್ಟು ಅಪಾಯಕಾರಿ ಕೆಲಸ ಮತ್ತೊಂದಿಲ್ಲ. ಒಂದು ಗ್ಲಾಸ್​ ನೀರಿಗೆ ಒಂದು ಡ್ರಾಪ್​ ಇಂಕ್​ ಹಾಕಿದಾಗೆ ನೀರಿನೊಂದಿಗೆ ಇಂಕ್​ ಸೇರಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ. 5 ರಿಂದ 10 ಸೆಕೆಂಡ್​ ಸಮಯ ಬೇಕಾಗುತ್ತದೆ. ಅದೇ ನೀವು ಒಂದು ಡ್ರಾಪ್​ ಇಂಕ್​ ಅನ್ನು ಒಂದು ಬಕೆಟ್​ ನೀರಿಗೆ ಹಾಕಿದರೆ ನೀರಿನೊಂದಿಗೆ ಇಂಕ್​​ ಸೇರಲು ಎಷ್ಟು ಸಮಯಾವಕಾಶ ಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಇದೇ ರೀತಿ ಹಾವು ಕಚ್ಚಿದಾಗಲು ನಿಮ್ಮ ದೇಹದಲ್ಲಿ ಆಗುತ್ತದೆ.

ಹಾವು ಕಚ್ಚಿದ ಜಾಗದಲ್ಲಿ ಮೇಲ್ಭಾದಲ್ಲಿ ಗಟ್ಟಿಯಾಗಿ ಕಟ್ಟಿದಾಗ ಅಲ್ಲಿರುವ ರಕ್ತದಲ್ಲಿ ವಿಷ ಸೇರಲು ಜಾಸ್ತಿ ಸಮಯ ಬೇಕಾಗುವುದಿಲ್ಲ. ಅದೇ ವಿಷ ನಮ್ಮ ದೇಹದಲ್ಲಿ ಹರಿಯುತ್ತಿರುವ ರಕ್ತದಲ್ಲಿ ಸೇರಲು ಜಾಸ್ತಿ ಸಮಯ ಬೇಕಾಗುತ್ತದೆ ಎಂದಿದ್ದಾರೆ. ಈ ಎರಡು ಕೆಲಸವನ್ನು ಮಾಡಿದಾಗ ಹಾವು ಕಚ್ಚಿರುವ ಜಾಗ ಬಹಳ ಬೇಗನೇ ಡ್ಯಾಮೇಜ್ ಆಗುತ್ತದೆ. ಗಟ್ಟಿಯಾಗಿ ಕಟ್ಟದೆ ಬಿಟ್ಟರೆ ವಿಷ ದೇಹದಲ್ಲಿ ಹರಿಯುವ ರಕ್ತದಲ್ಲಿ ಸೇರಲು ಜಾಸ್ತಿ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಚಿಕಿತ್ಸೆಗೆ ಸಮಯವಕಾಶ ದೊರೆಯುತ್ತದೆ ಎಂದಿದ್ದಾರೆ.

ಕೈಯಲ್ಲಿರುವ ಕಡ್ಗ, ಬೆರಳುಗಳಲ್ಲಿರುವ ಉಂಗುರವನ್ನು ಹಾವು ಕಚ್ಚಿದ ತಕ್ಷಣ ತೆಗೆದುಹಾಕಿ. ಏಕೆಂದರೆ ಸ್ವೆಲ್ಲಿಂಗ್​​​ ಆದಾಗ ಉಂಗುರ ಅಥವಾ ಕಡ್ಗ ತೆಗೆಯುವುದು ಕಷ್ಟವಾಗುತ್ತದೆ. ಮತ್ತು ಯಾವ ಹಾವು ಕಚ್ಚಿದೆ ಎಂದು ತಿಳಿದರೆ ಚಿಕಿತ್ಸೆಗೆ ಸಹಕಾರಿಯಾಗುತ್ತದೆ. ಅದಕ್ಕೆಂದು ಹಾವು ಕಚ್ಚಿದ ತಕ್ಷಣ ಹಾವಿನ ಫೋಟೊ ತರಲು ಹೋಗುವುದು ಅಥವಾ ಆ ಹಾವನ್ನು ಸಾಯಿಸುತ್ತೇವೆ ಎಂದು ಹೋಗುವುದನ್ನು ಬಿಟ್ಟು, ಸಮಯ ವ್ಯರ್ಥ ಮಾಡುವ ಬದಲು ಆಂಬ್ಯುಲೆನ್ಸ್​ಗೆ ಕರೆ ಮಾಡಿ ಸಂತ್ರಸ್ತರನ್ನು ಆಸ್ಪತ್ರೆಗೆ ದಾಖಲಿಸಿ.

ಹಾವು ಕಚ್ಚಿದೆಯೆಂದು ಮಂತ್ರ ಹಾಕಿಸುವ ಮೂಡನಂಬಿಕೆ ಇನ್ನು ಚಾಲ್ತಿಯಲ್ಲಿದೆ. ಹತ್ತಿರದಲ್ಲಿದೆ ಎಂದು ಯಾವುದೋ ಔಷಧಿಗಳನ್ನು ಪಡೆಯುವುದು, ಇದೆರಡರಿಂದ ಏನು ಆಗಲಿಲ್ಲ ಎಂದಾಗ ಆಸ್ಪತ್ರೆಗೆ ಬರುತ್ತಾರೆ. ಫುಲ್​ ಡ್ಯಾಮೇಜ್​ ಮಾಡಿಕೊಂಡು ವೈದ್ಯರ ಬಳಿ ಬಂದರೆ ಅವರೇನು ಮಾಡಲು ಸಾಧ್ಯ. ಹಾವು ಕಚ್ಚಿರುವುದಕ್ಕೆ ಚಿಕಿತ್ಸೆ ನೀಡುವುದೋ ಅಥವಾ ಯಾವುದೋ ಔಷಧಿ ಪಡೆದಿರುತ್ತಿರಿ ಅದರ ರಿಯಾಕ್ಷನ್​ಗೆ ಚಿಕಿತ್ಸೆ ನೀಡುವುದೋ, ಬ್ಲೆಡ್​ನಿಂದ ಕತ್ತರಿಸುವ ಜಾಗಕ್ಕೆ ಚಿಕಿತ್ಸೆ ನೀಡಬೇಕೋ ಎಂಬ ಗೊಂದಲ ವೈದ್ಯರಿಗೆ ಉಂಟಾಗುತ್ತದೆ. ಆದ್ದರಿಂದ ಹಾವು ಕಚ್ಚಿದಾಗ ಏನು ಮಾಡದೇ ಆಸ್ಪತ್ರೆಗೆ ಹೋಗುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips

Share This Article

ವೆಜ್​ ಪ್ರಿಯರಿಗಾಗಿ ಸ್ಟ್ರೀಟ್ ಸ್ಟೈಲ್ ಮೊಮೊಸ್; ಮನೆಯಲ್ಲೆ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ Recipe

ಸ್ಟ್ರೀಟ್​ ಫುಡ್​ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಸಂಜೆಯಾದರೆ ಸಾಕು ಸ್ಟ್ರೀಟ್ ಫುಡ್ ತಿನ್ನಬೇಕು ಎನ್ನಿಸುತ್ತದೆ.…

ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ?; ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ | Health Tips

ಹೈಹೀಲ್ಸ್​​ ಬೂಟುಗಳನ್ನು ಧರಿಸುವುದು ಪರಿಪೂರ್ಣ ಭಂಗಿಯನ್ನು ನೀಡುತ್ತದೆ, ಎತ್ತರವಾಗಿ ಕಾಣುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.…

ಶೀತದಲ್ಲಿಯೂ ಉತ್ತಮ ನಿದ್ರೆಗೆ ಈ ಟ್ರಿಕ್ಸ್​ ಫಾಲೋ ಮಾಡಿ; ನಿಮಗಾಗಿ ಹೆಲ್ತಿ ಟಿಪ್ಸ್​​ | Health Tips

ಕೆಲವರಿಗೆ ಚಳಿಗಾಲದಲ್ಲಿ ಹೆಚ್ಚು ನಿದ್ದೆ ಬಂದರೆ ಇನ್ನು ಕೆಲವರು ಕಣ್ಣುಗಳಿಂದ ನಿದ್ದೆ ಕಳೆದುಕೊಳ್ಳುತ್ತಾರೆ. ನಿದ್ರೆಯ ಮಾದರಿಯಲ್ಲಿ…