ಮೂರು ಕೊಲೆ ಸೇರಿ ಆರು ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್​ ಮೇಲೆ ಪೊಲೀಸರ ಫೈರಿಂಗ್, ಬಂಧನ

ಮಂಗಳೂರು: ಮಂಗಳೂರಿನ ಜಪ್ಪಿನ ಮೊಗರಿನಲ್ಲಿ ರೌಡಿಶೀಟರ್​ ಒಬ್ಬನ ಮೇಲೆ ಪೊಲೀಸರು ತಡರಾತ್ರಿ ಫೈರಿಂಗ್​​ ಮಾಡಿ ಬಂಧಿಸಿದ್ದಾರೆ.

ರೌಡಿಶೀಟರ್​ ಗೌರೀಶ್​ ಬಂಧಿತ. ಈತ ಜನರಿಂದ ಹಫ್ತಾ ವಸೂಲಿ ಮಾಡುತ್ತಿದ್ದ. ಈ ಬಗ್ಗೆ ದೂರು ಬಂದಿದ್ದ ಹಿನ್ನೆಲೆ ಪೊಲೀಸರು ಈತನನ್ನು ಬಂಧಿಸಲು ಮುಂದಾಗಿದ್ದರು. ಆಗ ಈತ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಇದರಿಂದ ಮುಖ್ಯ ಪೇದೆ ಶಾಂತಪ್ಪ ಎಂಬುವವರಿಗೆ ಗಾಯಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಆತ್ಮರಕ್ಷಣೆಗಾಗಿ ಈತನ ಕಾಲಿಗೆ ಫೈರಿಂಗ್ ಮಾಡಿ ಬಂಧಿಸಿದ್ದಾರೆ.

ಗಾಯಾಳುಗಳಾದ ಪೊಲೀಸ್​ ಮುಖ್ಯ ಪೇದೆ ಶಾಂತಪ್ಪ ಮತ್ತು ರೌಡಿಶೀಟರ್​ ಗೌರೀಶ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗೌರೀಶ್​ ಮೂರು ಕೊಲೆ ಸೇರಿ ಆರು ಪ್ರಕರಣದಲ್ಲಿ ಭಾಗಿಯಾಗಿದ್ದ. ಈತನನ್ನು ಬಂಧಿಸಲು ಪೊಲೀಸರು ಹಲವು ದಿನಗಳಿಂದಲೇ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)

One Reply to “ಮೂರು ಕೊಲೆ ಸೇರಿ ಆರು ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್​ ಮೇಲೆ ಪೊಲೀಸರ ಫೈರಿಂಗ್, ಬಂಧನ”

Leave a Reply

Your email address will not be published. Required fields are marked *