More

    ಅಗ್ನಿಶಾಮಕ ಠಾಣೆ ಮಂಜೂರು ಮಾಡಿಸಿ

    ಸಿರವಾರ: ಪಟ್ಟಣದ ಶ್ರೀರಾಮನಗರದಲ್ಲಿ ಮಂಗಳವಾರ ಬಣಿವೆಗಳಿಗೆ ಬೆಂಕಿ ತಗುಲಿ, ಮೇವು ಸಂಪೂರ್ಣ ಸುಟ್ಟು ಹೋಗುವುದರೊಂದಿಗೆ 3 ಎಮ್ಮೆ ಕರುಗಳು ಸತ್ತಿದ್ದವು. ಶಾಸಕ ಜಿ.ಹಂಪಯ್ಯ ನಾಯಕ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು. ರೈತರಿಗೆ ತ್ವರಿತವಾಗಿ ಪರಿಹಾರ ನೀಡುವಂತೆ ತಹಸೀಲ್ದಾರ್ ಸುರೇಶ ವರ್ಮಾಗೆ ಶಾಸಕ ಸೂಚಿಸಿದರು.

    ಸ್ಥಳೀಯವಾಗಿ ಅಗ್ನಿಶಾಮಕ ಠಾಣೆ ಇಲ್ಲದಿರುವುದರಿಂದ ಹೆಚ್ಚಿನ ಅನಾಹುತಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಸಿರವಾರದಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸಲು ಕ್ರಮಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದರು.

    ಕಂದಾಯ ನಿರೀಕ್ಷಕ ಶ್ರೀನಾಥ, ಪ್ರಮುಖರಾದ ಎನ್.ಉದಯಕುಮಾರ, ಟಿ.ಆರ್.ಪಾಟೀಲ್, ಚುಕ್ಕಿ ಉಮಾಪತಿ, ಜಿ.ವೀರೇಶ, ಅರಿಕೇರಿ ಶಿವಶರಣ, , ದೇವೆಂದ್ರಯ್ಯ ಸ್ವಾಮಿ, ಬೆಳವಿನೂರ ಶಿವಶರಣ, ಆದೇಶ ಗೋರ್ಕಲ್, ಕೆ.ಬಸವರಾಜ, ಕೆ.ಚನ್ನಬಸವ, ಕುಂಬಾರ ಸಿದ್ದರಾಮಪ್ಪ, ಬೈನೇರ ರಾಮಯ್ಯ, ವೆಂಕಟೇಶ ದೊರೆ, ರಂಗನಾಥ ಭೋವಿ, ಗಡ್ಲ ವೀರೇಶ, ಶ್ರೀಧರ ಸ್ವಾಮಿ, ಜಯಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts