ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಹಾನಿ

ಬಾವನಸೌಂದತ್ತಿ: ಗ್ರಾಮದ ಹೊರವಲಯದಲ್ಲಿರುವ ಕಬ್ಬಿನ ಗದ್ದೆಗೆ ಶುಕ್ರವಾರ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ.

ಗ್ರಾಮದ ಸುರೇಶ ಖೆಮಲಾಪುರೆ, ತಮ್ಮಾನಿ ಮಹಾಜನ, ಬಾಳು ಜಾಧವ, ಬಾಳು ಪವಾರ, ವಸಂತ ಬುವಾ, ನಂದು ಅರಗೆ ಅವರಿಗೆ ಸೇರಿದ್ದ ಸುಮಾರು 25 ಎಕರೆ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ. ಸುಮಾರು 50 ಲಕ್ಷ ರೂ. ಮೌಲ್ಯದ ಕಬ್ಬಿನ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳೀಯ ನಿವಾಸಿಗಳು ಹಾಗೂ ಅಗ್ನಿಶಾಮಕ ದಳ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.