ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಅಪಾರ ಹಾನಿ

ಚಿಂಚಲಿ: ಪಟ್ಟಣದ ಕುಡಚಿ ರಸ್ತೆ ಬದಿಯಲ್ಲಿರುವ ಕಬ್ಬಿನ ಗದ್ದೆಗೆ ಬುಧವಾರ ಸಂಜೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ.
ಪಟ್ಟಣದ ಸತೀಶ ಸಂಗನ್ನವರ ಮತ್ತು ಮಹಾದೇವ ಸಂಗನ್ನವರ ಇವರಿಗೆ ಸೇರಿದ ಚಿಂಚಲಿ- ಕುಡಚಿ ರಸ್ತೆ ಬದಿಯಲ್ಲಿರುವ 2 ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬಿಗೆ ಬೆಂಕಿ ತಗುಲಿ ಅಂದಾಜು 2 ಲಕ್ಷ ರೂ. ಮೌಲ್ಯದ ಬೆಳೆ ನಷ್ಟವಾಗಿದೆ. ಸ್ಥಳೀಯ ನಿವಾಸಿಗಳು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.