ಕೋಣನಕುಂಟೆ ಕ್ರಾಸ್‌ನ ಗಾರ್ಮೆಂಟ್ಸ್​ನಲ್ಲಿ ಅಗ್ನಿ ಅವಘಡ: ಬೆಲೆ ಬಾಳುವ ಯಂತ್ರಗಳು ಬೆಂಕಿಗೆ ಆಹುತಿ

ಬೆಂಗಳೂರು: ಕನಕಪುರ ರಸ್ತೆ ಕೋಣನಕುಂಟೆ ಕ್ರಾಸ್‌ನಲ್ಲಿ ಇರುವ ಗಾರ್ಮೆಂಟ್ಸ್‌ನಲ್ಲಿ ಸಾರ್ಟ್ ಸೆರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಬೆಲೆ ಬಾಳುವ ವಸ್ತುಗಳು ಅಗ್ನಿಗೆ ಆಹುತಿಯಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೋಣನಕುಂಟೆ ಕ್ರಾಸ್‌ನ 2 ಮಹಡಿಯ ಕಟ್ಟಡದಲ್ಲಿ ಡೇಸಿ ಗಾರ್ಮೆಂಟ್ಸ್ ಇದ್ದು, ಭಾನುವಾರ ಮಧ್ಯಾಹ್ನ 3.30ರಲ್ಲಿ ಮೊದಲ ಮಹಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಅಕ್ಕಪಕ್ಕದವರು ದಟ್ಟ ಹೊಗೆ ಕಂಡು ಅಗ್ನಿ ಶಾಮಕ ದಳ ಮತ್ತು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದಾರೆ. ವಿಷಯ ತಿಳಿದ ಕೂಡಲೇ ಬನಶಂಕರಿ, ಜಯನಗರ ಮತ್ತು … Continue reading ಕೋಣನಕುಂಟೆ ಕ್ರಾಸ್‌ನ ಗಾರ್ಮೆಂಟ್ಸ್​ನಲ್ಲಿ ಅಗ್ನಿ ಅವಘಡ: ಬೆಲೆ ಬಾಳುವ ಯಂತ್ರಗಳು ಬೆಂಕಿಗೆ ಆಹುತಿ