ಸೂರತ್​ನ ಶಾಪಿಂಗ್​ ಕಾಂಪ್ಲೆಕ್ಸ್​ನಲ್ಲಿದ್ದ ಕೋಚಿಂಗ್​ ಸೆಂಟರ್​ನಲ್ಲಿ ಬೆಂಕಿ: 19 ವಿದ್ಯಾರ್ಥಿಗಳ ದುರ್ಮರಣ

ಸೂರತ್​: ಇಲ್ಲಿನ ಸಾರ್ಥನಾ ಬಡಾವಣೆಯಲ್ಲಿರುವ ಶಾಪಿಂಗ್​ ಕಾಂಪ್ಲೆಕ್ಸ್​ನ 2ನೇ ಮಹಡಿಯಲ್ಲಿ ಹೊತ್ತಿಕೊಂಡ ಬೆಂಕಿ, ನಾಲ್ಕನೇ ಮಹಡಿಯಲ್ಲಿದ್ದ ಕೋಚಿಂಗ್​ ಸೆಂಟರ್​ಗೆ ವ್ಯಾಪಿಸಿ 19 ಮಂದಿ ಮೃತಪಟ್ಟಿದ್ದಾರೆ.

ತಪ್ಪಿಸಿಕೊಳ್ಳುವ ಯತ್ನದಲ್ಲಿ ಕೋಚಿಂಗ್​ ಸೆಂಟರ್​ನ ಕಿಟಕಿಯಿಂದ ಹೊರಬಂದು, ನಾಮಫಲಕವನ್ನು ಆಧರಿಸಿ ನಿಲ್ಲಲು ವಿದ್ಯಾರ್ಥಿಗಳು ಯತ್ನಿಸಿದರು. ಆದರೆ, ಅವರ ಭಾರ ತಡೆಯದೆ ನಾಮಫಲಕ ಕುಸಿದಿದ್ದರಿಂದ, ಕೆಳಬಿದ್ದ ವಿದ್ಯಾರ್ಥಿಗಳು ಮೃತಪಟ್ಟರು ಎನ್ನಲಾಗಿದೆ.
ತಕ್ಷಶಿಲಾ ಶಾಪಿಂಗ್​ ಕಾಂಪ್ಲೆಕ್ಸ್​ನಲ್ಲಿನ ಬೆಂಕಿಗೆ ಶಾರ್ಟ್​ ಸರ್ಕ್ಯೂಟ್​ ಕಾರಣ ಎಂದು ಶಂಕಿಸಲಾಗಿದೆ. ಅಗ್ನಿಶಾಮಕದಳ ಸಿಬ್ಬಂದಿ 18 ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಪ್ರಧಾನಿ ಮೋದಿ ಸಂತಾಪ
ಅಗ್ನಿ ಅನಾಹುತದಿಂದಾಗಿ ಹಲವು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ರಾಜನಾಥ ಸಿಂಗ್​ ಟ್ವೀಟ್​ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಸೂರತ್​ ಘಟನೆಯಿಂದ ತೀವ್ರ ದುಃಖವಾಗಿದೆ. ಮೃತಪಟ್ಟಿರುವ ವಿದ್ಯಾರ್ಥಿಗಳ ಕುಟುಂಬದವರಿಗೆ ಸಾಂತ್ವನ ಹೇಳಲು ಬಯಸುತ್ತೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗಲೆಂದು ಹಾರೈಸುತ್ತೇನೆ. ಘಟನೆಯಿಂದ ತೊಂದರೆಗೊಳಗಾದವರಿಗೆ ತಕ್ಷಣವೆ ನೆರವು ನೀಡುವಂತೆ ಗುಜರಾತ್​ ಸರ್ಕಾರಕ್ಕೆ ಸೂಚಿಸಿದ್ದೇನೆ ಎಂದು ಪ್ರಧಾನಿ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

4 ಲಕ್ಷ ರೂ. ಪರಿಹಾರ ಘೋಷಿಸಿದ ಗುಜರಾತ್​ ಸರ್ಕಾರ
ಘಟನೆಯ ಕುರಿತು ಕಳವಳ ವ್ಯಕ್ತಪಡಿಸಿರುವ ಗುಜರಾತ್​ ಸಿಎಂ ವಿಜಯ್​ ರೂಪಾನಿ, ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಮೃತಪಟ್ಟಿರುವ ವಿದ್ಯಾರ್ಥಿಗಳ ಕುಟುಂಬದವರಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. (ಏಜೆನ್ಸೀಸ್​)
ಸೂರತ್​, ಅಗ್ನಿ ಅನಾಹುತ, ತಕ್ಷಶಿಲಾ ಕಾಂಪ್ಲೆಕ್ಸ್​, ಕೋಚಿಂಗ್​ ಸೆಂಟರ್​, Surat, Fire Incident, Takshashila Complex, Coaching Centre

One Reply to “ಸೂರತ್​ನ ಶಾಪಿಂಗ್​ ಕಾಂಪ್ಲೆಕ್ಸ್​ನಲ್ಲಿದ್ದ ಕೋಚಿಂಗ್​ ಸೆಂಟರ್​ನಲ್ಲಿ ಬೆಂಕಿ: 19 ವಿದ್ಯಾರ್ಥಿಗಳ ದುರ್ಮರಣ”

Leave a Reply

Your email address will not be published. Required fields are marked *