ಸಿನಿಮಾ

ಬೆಂಗಳೂರಲ್ಲಿ ಭಾರೀ ಅಗ್ನಿ ಅವಘಡ; ಹೊತ್ತಿ ಉರಿದ ಮೊಬೈಲ್​ ಟವರ್​

ಬೆಂಗಳೂರು: ಪ್ರತ್ಯೇಕ ಘಟನೆಗಳಲ್ಲಿ ಜನನಿಬಿಡ ಪ್ರದೇಶದಲ್ಲಿರುವ ವಾಣಿಜ್ಯ ಕಟ್ಟಡಗಳಿಗೆ ಬೆಂಕಿ ತಗುಲಿದ್ದು ಕೆಲ ಸಮಯದಲ್ಲೇ ವ್ಯಾಪಕವಾಗಿ ಹರಡಿದೆ.

ನಗರದ ಚಿಕ್ಕಪೇಟೆಯಲ್ಲಿರುವ ಬಿ.ವಿ.ಕೆ. ಅಯ್ಯಂಗಾರ್​ ರಸ್ತೆಯಲ್ಲಿರುವ ಪದ್ಮಶ್ರೀ ಸಿಲ್ಕ್ ಅಂಡ್ ಸ್ಯಾರಿಸ್ ಅಂಗಡಿ ಮೇಲ್ಭಾಗದಲ್ಲಿರುವ ಮೊಬೈಲ್​ ಟವರ್​ಗೆ ಬೆಂಕಿ ಹೊತ್ತಿಕೊಂಡಿದ್ದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಮಲ್ಲೇಶ್ವರಂ 7ನೇ ಕ್ರಾಸ್​ನಲ್ಲಿರುವ ಕರೆಂಟ್​ ಕಂಬದ ಫಯ್ಊಸ್​ ಬಾಕ್ಸ್​ನಲ್ಲಿ ಬಂಕಿ ಕಾಣಿಸಿಕೊಂಡಿದ್ದು ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಅವಘಡವನ್ನು ತಪ್ಪಿಸಿದ್ದಾರೆ.

Fire accident

Latest Posts

ಲೈಫ್‌ಸ್ಟೈಲ್