17.8 C
Bengaluru
Wednesday, January 22, 2020

ಸಿಟಿ ಸೆಂಟರ್ ಮಾಲ್‌ನಲ್ಲಿ ಅಗ್ನಿ ಆಕಸ್ಮಿಕ

Latest News

ಕರ್ನಾಟಕ ಕುಸ್ತಿ ಹಬ್ಬಫೆ. 15ರಿಂದ

ಧಾರವಾಡ: ಫೆ. 15ರಿಂದ 18ರವರೆಗೆ ನಗರದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಲಾಗುವುದು. ಅಂತಾರಾಷ್ಟ್ರೀಯ ಕುಸ್ತಿಪಟುಗಳು ಸೇರಿ ಸುಮಾರು 2,000ಕ್ಕೂ ಹೆಚ್ಚು ಕುಸ್ತಿಪಟುಗಳು, ತರಬೇತಿದಾರರು...

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

< ಇಬ್ಬರು ಸಿಬ್ಬಂದಿ ಅಸ್ವಸ್ಥ * ಅಗ್ನಿಶಾಮಕದಳದಿಂದ 3 ತಾಸು ಕಾರ್ಯಾಚರಣೆ>

ಮಂಗಳೂರು: ನಗರದ ಸಿಟಿ ಸೆಂಟರ್‌ನ ನಾಲ್ಕನೇ ಮಹಡಿಯಲ್ಲಿರುವ ಫುಡ್ ಕೋರ್ಟ್‌ನಲ್ಲಿ ಗುರುವಾರ ಬೆಂಕಿ ಅನಾಹುತ ಉಂಟಾಗಿ ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣಗೊಂಡಿತು.

ಘಟನೆಯಿಂದ ಸಿಟಿ ಸೆಂಟರ್ ಸಿಬ್ಬಂದಿ ಅಜಿತ್ ಹಾಗೂ ಸಪ್ನಾ ಅಸ್ವಸ್ಥಗೊಂಡಿದ್ದಾರೆ. ಸಿಟಿ ಸೆಂಟರ್‌ನ ಎಲ್ಲ ಮಹಡಿಗಳಲ್ಲಿ ದಟ್ಟ ಹೊಗೆ ತುಂಬಿದ ಕಾರಣ ಸಪ್ನಾ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕಾರ್ಯಾಚರಣೆ ಸಂದರ್ಭ ಅಜಿತ್ ಅವರ ಹಣೆಗೆ ಗಾಯವಾಗಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ: ಸಿಟಿ ಸೆಂಟರ್‌ನ ಫುಡ್ ಕೋರ್ಟ್‌ನಲ್ಲಿ ಮಧ್ಯಾಹ್ನ 11.20ರ ವೇಳೆಗೆ ಅಡುಗೆ ಕೋಣೆಯಿಂದ ಹೊರಗೆ ಹೊಗೆ ಹೋಗುವ ಕೊಳವೆಯಲ್ಲಿ ಬೆಂಕಿ ಕಾಣಿಸಿಕೊಂಡು ಎಲ್ಲ ಮಹಡಿಗಳಲ್ಲಿ ಹೊಗೆ ತುಂಬಿತ್ತು. ತಕ್ಷಣ ಸಿಬ್ಬಂದಿ ಕೂಗಿಕೊಂಡಿದ್ದು, ಗ್ರಾಹಕರು, ಅಂಗಡಿ ಮಾಲೀಕರು, ಸಿಬ್ಬಂದಿ ಓಡಿ ಹೊರ ಬಂದಿದ್ದಾರೆ. ಫುಡ್ ಕೋರ್ಟ್‌ನಲ್ಲಿ ಗ್ರಾಹಕರು ಆರ್ಡರ್ ಮಾಡಿದ ಚಿಕನ್ ಬಿರಿಯಾನಿ, ಫ್ರೈಡ್ ರೈಸ್ ಪ್ಲೇಟಲ್ಲೇ ಬಾಕಿಯಾಗಿದ್ದವು. ಗ್ರಾಹಕರು ಎಲ್ಲವನ್ನೂ ಬಿಟ್ಟು ಹೊರಗೆ ಓಡಿದ್ದರು. ಚೇರ್, ಟೇಬಲ್‌ಗಳು ಚೆಲ್ಲಾಪಿಲ್ಲಿಯಾಗಿದ್ದವು.
ಕೆಲವು ಅಂಗಡಿಗಳಿಗೆ ಬಾಗಿಲು ಹಾಕದೆ ಹೊರ ಬಂದಿದ್ದರೆ, ಇನ್ನು ಕೆಲವರು ಮೊಬೈಲ್, ಬ್ಯಾಗ್‌ಗಳನ್ನು ಅಲ್ಲಲ್ಲೇ ಬಿಟ್ಟು ಹೊರಗೆ ಓಡಿ ಬಂದಿದ್ದಾರೆ. ಸಿನೆಪೊಲಿಸ್‌ನಲ್ಲಿ ಚಿತ್ರ ವೀಕ್ಷಿಸುತ್ತಿದ್ದ ನೂರಾರು ಪ್ರೇಕ್ಷಕರು ಗಾಬರಿಗೊಂಡು ಹೊರಗೆ ಓಡಿ ಬಂದಿದ್ದಾರೆ. ಸೆಕ್ಯೂರಿಟಿ ಗಾರ್ಡ್‌ಗಳು ಎಲ್ಲ ಸಿಬ್ಬಂದಿಯನ್ನು ತಕ್ಷಣ ಹೊರ ಕಳುಹಿಸಲು ಸಹಕರಿಸಿದರು.

ಕದ್ರಿ ಹಾಗೂ ಪಾಂಡೇಶ್ವರ ಠಾಣೆಗಳಿಂದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ನಾಲ್ಕು ಅಗ್ನಿ ಶಮನ ಲಾರಿಗಳು ಹಾಗೂ 20ಕ್ಕೂ ಅಧಿಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಕಿ ಅಡುಗೆ ಕೋಣೆಗೆ ಆವರಿಸದಂತೆ ತಡೆಯುವಲ್ಲಿ ಯಶಸ್ವಿಯಾದರು. ಎಕ್ಸಾಸ್ಟ್ ಫ್ಯಾನ್ ಮೂಲಕ ಮಾಲ್ ಒಳಗೆ ತುಂಬಿದ್ದ ಹೊಗೆಯನ್ನು ಹೊರ ಹಾಕಿದರು.

ಸಂಚಾರ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ ನೇತೃತ್ವದಲ್ಲಿ ಕದ್ರಿ ಹಾಗೂ ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಕಾರ್ಯಾಚರಣೆ ಸಂದರ್ಭ ಕೆ.ಎಸ್.ರಾವ್ ರಸ್ತೆಯ ನವಭಾರತ ವೃತ್ತದಿಂದ ಹಂಪನಕಟ್ಟೆ ಕಡೆಗೆ ಹೋಗುವ ರಸ್ತೆ ಬಂದ್ ಮಾಡಲಾಗಿತ್ತು. ಸ್ಥಳದಲ್ಲಿ ಸಾವಿರಾರು ಮಂದಿ ಕುತೂಹಲಿಗಳು ನೆರೆದಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸಪಟ್ಟರು.

ಚಿಮಣಿಯಿಂದ ಬೆಂಕಿ?: ಫುಡ್ ಕೋರ್ಟ್‌ನಲ್ಲಿ ಹೊಗೆ ಕಾಣಿಸಿಕೊಳ್ಳಲು ಮೂಲ ಕಾರಣ ಹೊಗೆ ಹೋಗುವ ಕೊಳವೆ(ಚಿಮಣಿ). ಹೊಟೇಲ್‌ನಲ್ಲಿ ಅಡುಗೆ ಮಾಡುವ ಸಂದರ್ಭ ಕೊಳವೆಯಲ್ಲಿ ಹೊಗೆ ಹೊರ ಹೋಗುವುದರಿಂದ ಎಣ್ಣೆಯ ಜಿಗುಟು ಅಂಟಿಕೊಳ್ಳುವುದು ಸಾಮಾನ್ಯ. ಅದನ್ನು ಆಗಾಗ ಶುದ್ಧೀಕರಿಸಬೇಕು. ಇಲ್ಲದಿದ್ದರೆ ಬೆಂಕಿ ಹತ್ತಿಕೊಳ್ಳುತ್ತದೆ. ಇದೇ ಕಾರಣದಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ. ಇದರಿಂದಾಗಿ ದಟ್ಟ ಹೊಗೆ ಆವರಿಸಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದರು.

ಮಾಲ್ ಅಪರಾಹ್ನ ಓಪನ್: ಸಿಟಿ ಸೆಂಟರ್ ಮಾಲ್ ಜನನಿಬಿಡ ಪ್ರದೇಶದಲ್ಲಿದ್ದು, ದಿನವಿಡೀ ಗ್ರಾಹಕರು ತುಂಬಿರುತ್ತಾರೆ. ಗುರುವಾರ ಹಾಗೂ ಮಧ್ಯಾಹ್ನದ ಸಮಯವಾದ ಕಾರಣ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಫುಡ್ ಕೋರ್ಟ್‌ನಲ್ಲಿ ದಟ್ಟ ಹೊಗೆ ಬಂದ ತಕ್ಷಣ ಎಲ್ಲ ಸಿಬ್ಬಂದಿ ಹೊರ ಬಂದು ಹೊರ ಆವರಣದಲ್ಲಿ ಆತಂಕದಲ್ಲಿ ಕುಳಿತಿದ್ದರು. ಎರಡು ಗಂಟೆಯ ಬಳಿಕ ಸಿಬ್ಬಂದಿಯನ್ನು ಒಳ ಬಿಡಲಾಯಿತು. ಮಧ್ಯಾಹ್ನದ ಬಳಿಕ ಮಾಲ್ ಗ್ರಾಹಕರಿಗೆ ತೆರೆದುಕೊಂಡಿದೆ.

ತಪ್ಪಿದ ಅನಾಹುತ: ಫುಡ್‌ಕೋರ್ಟ್‌ನ ಕೊಳವೆಯಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಅಡುಗೆ ಕೋಣೆ ಹೊತ್ತಿಕೊಳ್ಳುತ್ತಿದ್ದರೆ ಇತರ ಕಡೆಗೂ ವ್ಯಾಪಿಸುವ ಸಾಧ್ಯತೆ ಇತ್ತು. ಇಲ್ಲಿ ಹಲವಾರು ಮಂದಿ ಆಹಾರ ಸೇವಿಸುತ್ತಿದ್ದರು. ಹೊರಗೆ ಬರಬೇಕಾದರೆ ಎರಡನೇ ಮಹಡಿಗೆ ಬರಬೇಕು. ಅಲ್ಲಿಯೂ ಬಾಗಿಲು ಹಾಕಿತ್ತು. ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಕಾರ್ಯಾಚರಣೆಗೆ ಒಂದಷ್ಟು ಸವಾಲು ಎದುರಿಸುವಂತಾಯಿತು. ಅದೃಷ್ಟವಶಾತ್ ಭಾರಿ ದುರಂತ ತಪ್ಪಿದೆ.

ಕದ್ರಿ ಹಾಗೂ ಪಾಂಡೇಶ್ವರ ಅಗ್ನಿಶಾಮಕದಳದ 20ಕ್ಕೂ ಅಧಿಕ ಸಿಬ್ಬಂದಿ ಮೂರು ತಾಸು ಕಾರ್ಯಾಚರಣೆ ನಡೆಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಮಾಲ್‌ನ ಸಿಬ್ಬಂದಿ ಕೂಡ ಕಾರ್ಯಾಚರಣೆಗೆ ಉತ್ತಮ ಸಹಕಾರ ನೀಡಿದ್ದಾರೆ.
– ಟಿ.ಎನ್.ಶಿವಶಂಕರ್, ಮುಖ್ಯಾಧಿಕಾರಿ, ಅಗ್ನಿಶಾಮಕದಳ ಮಂಗಳೂರು

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...