ಕಾರ್ಖಾನೆಯೊಂದರಲ್ಲಿ ಭಾರಿ ಸ್ಫೋಟ, 8 ಮಂದಿಗೆ ಗಂಭೀರ ಗಾಯ: ರಕ್ಷಣೆ ವೇಳೆ ಮತ್ತೆ ಸ್ಫೋಟ…

ಹುಬ್ಬಳ್ಳಿ: ಕೈಗಾರಿಕಾ ಪ್ರದೇಶವೊಂದರಲ್ಲಿ ಭಾರಿ ಸ್ಫೋಟ ಉಂಟಾಗಿದ್ದು, 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ ರಕ್ಷಣಾ ಕಾರ್ಯಾಚರಣೆ ವೇಳೆ ಮತ್ತೆ ಸ್ಫೋಟವಾಗಿದ್ದು, ಭಯದ ವಾತಾವರಣ ಉಂಟಾಗಿದೆ. ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ವಸಾಹತುವಿನಲ್ಲಿನ ಬರ್ತ್​ಡೇಗೆ ಸ್ಪಾರ್ಕ್ ಕ್ಯಾಂಡಲ್​ ತಯಾರಿಸುವ ಕಾರ್ಖಾನೆಯಲ್ಲಿ ಸಂಭವಿಸಿದ ಈ ಅಗ್ನಿ ಅವಘಡ ಉಂಟಾಗಿದೆ. ಶಾರ್ಟ್ ಸರ್ಕ್ಯೂಟ್​​ನಿಂದಾಗಿ ಅಗ್ನಿ ಅವಘಡ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಅಗ್ನಿ ಅವಘಡದಿಂದಾಗಿ ಕಾರ್ಖಾನೆಯಲ್ಲಿನ ಮದ್ದುಗಳು ಸ್ಫೋಟಗೊಳ್ಳುತ್ತಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಗಾಯಾಳುಗಳನ್ನು ಕಿಮ್ಸ್​ಗೆ ಕರೆದೊಯ್ದು ದಾಖಲಿಸಿ ಚಿಕಿತ್ಸೆ … Continue reading ಕಾರ್ಖಾನೆಯೊಂದರಲ್ಲಿ ಭಾರಿ ಸ್ಫೋಟ, 8 ಮಂದಿಗೆ ಗಂಭೀರ ಗಾಯ: ರಕ್ಷಣೆ ವೇಳೆ ಮತ್ತೆ ಸ್ಫೋಟ…