ರಾಯಚೂರು: ನಾಡಿನೆಲ್ಲೆಡೆ ಸಂಕ್ರಾಂತಿ ಸಡಗರ ಕಳೆಗಟ್ಟಿದೆ. ದನ-ಕರುಗಳ ಜತೆಗೆ ಎಮ್ಮೆಗಳಿಗೂ ಮೈತೊಳೆದು ಕೊಂಬುಗಳನ್ನು ಸಿಂಗರಿಸಿ ಕಿಚ್ಚುಹಾಯಿಸುವಲ್ಲಿ ರೈತರು ಬಿಜಿಯಾಗಿದ್ದರು. ಆದರೆ ಇಲ್ಲೊಬ್ಬ ರೈತನಿಗೆ ಈ ಬಾರಿಯ ಸುಗ್ಗಿಹಬ್ಬ ಸಡಗರ ತರಲಿಲ್ಲ, ಅವನು ಸಾಕಿದ್ದ ಎಮ್ಮೆಗಳು ಕೊಟ್ಟಿಗೆಯಲ್ಲೇ ಸಜೀವ ದಹನವಾಗಿವೆ!
ಇಂತಹ ಘಟನೆ ಸಿಂಧನೂರು ತಾಲೂಕಿನ ಹತ್ತಿಗುಡ್ಡ ಗ್ರಾಮದಲ್ಲಿ ಸಂಭವಿಸಿದೆ. ಸಂಕ್ರಾಂತಿ ಹಬ್ಬದ ಮುನ್ನಾ ದಿನವಾದ ಬುಧವಾರ ರಾತ್ರಿ ಕೊಟ್ಟಿಗೆಯಲ್ಲೇ 3 ಎಮ್ಮೆಗಳು ಸಜೀವ ದಹನವಾಗಿವೆ. ಮತ್ತೆ 3 ಎಮ್ಮೆಗಳ ದೇಹ ಭಾಗಶಃ ಸುಟ್ಟಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿವೆ.
ಸಂಕ್ರಾಂತಿ ಸಡಗರದಲ್ಲಿದ್ದ ರೈತ ಮಂಜುನಾಥ, ತಾನು ಸಾಕಿದ್ದ ಎಮ್ಮೆಗಳು ಬೆಂಕಿಗೆ ಆಹುತಿಯಾಗಿದ್ದನ್ನ ಕಂಡು ಆಘಾತಗೊಂಡಿದ್ದಾರೆ. ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ. 3 ಎಮ್ಮೆಗಳ ಜೊತೆಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಜೋಳದ ಮೇವು, ತೊಗರಿ ಹೊಟ್ಟು, ಕಡಲೆ ಹೊಟ್ಟು, ಶೇಂಗಾ ಹೊಟ್ಟು ಸುಟ್ಟು ಭಸ್ಮವಾಗಿವೆ.
ತಾನೇ ಸಾಕಿದ್ದ ಹಸುಗೆ ಬಲಿಯಾದ ಬಾಲಕ! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ
ಈ ಬಾರಿ ಗವಿಗಂಗಾಧರೇಶ್ವರ ಸ್ವಾಮಿಗಿಲ್ಲ ಸೂರ್ಯರಶ್ಮಿ! ಶಿವಲಿಂಗವನ್ನ ಸ್ಪರ್ಶಿಸದೆ ಪಥ ಬದಲಿಸಿದ ಭಾಸ್ಕರ