More

    ಬಿಎಂಟಿಸಿಯ 18 ಸಿಬ್ಬಂದಿ ವಿರುದ್ಧ ಎಫ್​ಐಆರ್

    ಬೆಂಗಳೂರು: ಸರ್ಕಾರಿ ಕರ್ತವ್ಯಕ್ಕೆ ಗೈರುಹಾಜರಾಗಿ, ಸುದೀರ್ಘ ರಜೆಯ ಬಳಿಕ ಮತ್ತೆ ಕರ್ತವ್ಯಕ್ಕೆ ಮರಳಲು ನಕಲಿ ವೈದ್ಯಕೀಯ ಪ್ರಮಾಣಪತ್ರ ಸೃಷ್ಟಿಸಿದ ಮತ್ತು ಸಲ್ಲಿಸಿದ ಆರೋಪದಡಿ ಬಿಎಂಟಿಸಿಯ 18 ಚಾಲಕರು ಮತ್ತು ನಿರ್ವಾಹಕರ ವಿರುದ್ಧ ವಿಲ್ಸನ್ ಗಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯ ಭದ್ರತಾ ಮತ್ತು ಜಾಗೃತ ದಳ ಅಧಿಕಾರಿ ಸಿ.ಎಸ್. ಸ್ಮಿತಾ ದೂರು ದಾಖಲಿಸಿದ್ದಾರೆ. ಇದೀಗ ಆ 18 ಮಂದಿಯ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ವಿಲ್ಸನ್ ಗಾರ್ಡ್​ನ್ ಠಾಣೆ ಪೊಲೀಸರು ತಿಳಿಸಿದ್ದಾರೆ.

    ಅನುಮತಿ ಇಲ್ಲದೆ ರಜೆ: ಬಿಎಂಟಿಸಿಯ ವಿವಿಧ ಡಿಪೋನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕ ಮತ್ತು ನಿರ್ವಹಕರು ಮೇಲಧಿಕಾರಿಯ ಅನುಮತಿ ಇಲ್ಲದೆ ಮತ್ತು ರಜೆ ಚೀಟಿ ಕೊಡದೆ ದೀರ್ಘಕಾಲ ಕರ್ತವ್ಯಕ್ಕೆ ಗೈರುಹಾಜರಾಗುತ್ತಾರೆ. ಹಲವು ಬಾರಿ ನೋಟಿಸ್ ನೀಡಿದರೂ ಸೇವೆಗೆ ಮರಳುವುದಿಲ್ಲ. ಕೊನೆಗೊಂದು ದಿನ ಅನಾರೋಗ್ಯದಿಂದಾಗಿ ಬೌರಿಂಗ್ ಮತ್ತು ಕರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ವೈದ್ಯಕೀಯ ಪ್ರಮಾಣಪತ್ರ ಪಡೆದು ಇಲಾಖೆಗೆ ಸಲ್ಲಿಸಿ ಕರ್ತವ್ಯಕ್ಕೆ ಮರಳುತ್ತಿದ್ದರು. ಇದೊಂದು ದೊಡ್ಡ ದಂಧೆಯಾಗಿತ್ತು. ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸುತ್ತಿದ್ದ ಡಿಪೋ-16ರ ಕಂಡಕ್ಟರ್ ಬಿರಾದರ್ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕೆಂದು ಸಿ.ಎಸ್. ಸ್ಮಿತಾ ದೂರಿನಲ್ಲಿ ಮನವಿ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ನೈಜತೆ ಪರಿಶೀಲಿಸಿದಾಗ ಸಿಕ್ಕಿಬಿದ್ದರು

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಿಎಂಟಿಸಿ ಜಾಗೃತ ದಳ, ಸಿಬ್ಬಂದಿ ಸಲ್ಲಿಸಿದ್ದ ವೈದ್ಯಕೀಯ ಪ್ರಮಾಣಪತ್ರಗಳನ್ನು ಸಂಬಂಧಪಟ್ಟ ಆಸ್ಪತ್ರೆ ಅಧಿಕಾರಿಗಳಿಗೆ ಸಲ್ಲಿಸಿ ನೈಜತೆ ಪರಿಶೀಲನೆಗೆ ಮುಂದಾಗಿದ್ದರು. ಚಾಲಕರು ಮತ್ತು ನಿರ್ವಾಹಕರು ಸಲ್ಲಿಸಿರುವ ಪ್ರಮಾಣಪತ್ರಗಳು ನಕಲಿ ಎಂದು ಬೌರಿಂಗ್ ಮತ್ತು ಕರ್ಜನ್ ಆಸ್ಪತ್ರೆ ವೈದ್ಯರು, ದೃಢಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts