ಬೆಂಗಳೂರು: ಆಸ್ತಿಗಾಗಿ ಕಿರುಕುಳ ನೀಡ್ತಿದ್ದಾರೆ ಎಂದು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ನೇತ್ರಾ ನಾರಾಯಣ ಸೇರಿ ಐವರ ವಿರುದ್ಧ ನೇತ್ರಾ ಅವರ ಮಾವ ಎನ್.ಎ.ಜಯರಾಮಯ್ಯ(85) ಎಂಬುವವರು ಡಿಜೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜಯರಾಮಯ್ಯ ಅವರು ಕೊಟ್ಟ ದೂರಿನ ಮೇರೆಗೆ ಕಾವಲ್‌ಭೈರಸಂದ್ರ ವಾರ್ಡ್ ಮಾಜಿ ಪಾಲಿಕೆ ಸದಸ್ಯೆ ನೇತ್ರಾ ನಾರಾಯನ್, ಕಾರು ಚಾಲಕ ಸೋಮ, ವಿನಯ್, ರಾಜು ಹಾಗೂ ನವೀನ್ ಕುಮಾರ್ ಎಂಬಾತನ ವಿರುದ್ಧ ದೂರು ದಾಖಲಾಗಿದೆ.
ಈ ಮೊದಲು ಜಯರಾಮಯ್ಯ ಅವರು ಕೊಟ್ಟ ದೂರಿನ ಮೇರೆಗೆ ಪೊಲೀಸರು ಗಂಭೀರ ಸ್ವರೂಪವಲ್ಲದ ಪ್ರಕರಣ (ಎನ್‌ಸಿಆರ್) ದಾಖಲಿಸಿದ್ದರು. ಇದೀಗ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರ ಸೂಚನೆ ಮೇರೆಗೆ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಗ್ರಾಹಕರಿಗೆ ದೊರಕಲಿದೆ ಹಕ್ಕು
ನೇತ್ರಾ ನಾರಾಯಣ ಅವರ ಪತಿ ಎನ್.ಜೆ. ಲಕ್ಷ್ಮೀನಾರಾಯಣ ಅವರು ಎನ್.ಎ.ಜಯರಾಮಯ್ಯ ಅವರ ನಾಲ್ವರು ಮಕ್ಕಳ ಪೈಕಿ ಎರಡನೇಯವರು. ಜಯರಾಮಯ್ಯ ನೀಡಿದ ದೂರಿನಲ್ಲಿರುವ ಮಾಹಿತಿ ಪ್ರಕಾರ, ಜಯರಾಮಯ್ಯ ಅವರ ಪತ್ನಿ ಶಾಂತಮ್ಮ 2019ರ ಅಕ್ಟೋಬರ್ ನಲ್ಲಿ ಮತ್ತು ಪುತ್ರ ಎನ್.ಜೆ.ಲಕ್ಷ್ಮೀನಾರಾಯಣ ಅವರು 2019ರ ಜೂನ್ ತಿಂಗಳಲ್ಲಿ ನಿಧನರಾಗಿದ್ದಾರೆ. ಇದಾಗಿ, ಜಯರಾಮಯ್ಯ ಒಬ್ಬರೇ ಸಾಕಮ್ಮ ಹನುಮಂತಪ್ಪ ಲೇಔಟ್ನಲ್ಲಿ ವಾಸವಾಗಿದ್ದಾರೆ. ಪತಿಯ ನಿಧನಾನಂತರ ನೇತ್ರಾ ನಾರಾಯಣ ಆಸ್ತಿ ವಿವಾದ ಶುರುವಾಗಿತ್ತು.
ಇದನ್ನೂ ಓದಿ: ಚೀನಾದ ಐಟಿ ಕಂಪನಿಗಳು ಗಣ್ಯ ವ್ಯಕ್ತಿಗಳ ಮೇಲೆ ನಿಗಾ: ಉನ್ನತ ಮಟ್ಟದ ಸಮಿತಿಯಿಂದ ತನಿಖೆ
ಹಲವು ತಿಂಗಳುಗಳಿಂದ ಈ ಆಸ್ತಿ ಕುರಿತ ಜಗಳ ನಡೆಯುತ್ತಿದ್ದು, ಸ್ವಯಾರ್ಜಿತ ಆಸ್ತಿಯಾದ ಕಾರಣ ಎಲ್ಲವನ್ನೂ ತನ್ನ ಹೆಸರಿಗೆ ಬರೆದುಕೊಡುಬೇಕು ಎಂದು ಕಿರುಕುಳ ನೀಡುತ್ತಿದ್ದಾರೆ. ಇಲ್ಲದೇ ಹೋದರೆ ಮೂವರು ಮಕ್ಕಳ ವಿರುದ್ಧವೂ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಿಸುವುದಾಗಿ ನೇತ್ರಾ ಬೆದರಿಕೆ ಹಾಕುತ್ತಿದ್ದಾರೆ. ನನಗೆ ರಾಜಕಾರಣಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಪರಿಚಯವಿದ್ದು, ಯಾರು ಏನು ಮಾಡಲು ಸಾಧ್ಯವಿಲ್ಲ ಎಂದು ಬೆದರಿಕೆ ಒಡ್ಡುತ್ತಿದ್ದಾರೆ. ಸೊಸೆಯ ಕಾರು ಚಾಲಕ ಹಾಗೂ ಇತರ ಸಿಬ್ಬಂದಿಯಿಂದಲೂ ಬೆದರಿಕೆ ಇದೆ ಎಂದು ದೂರು ದಾಖಲಿಸಿದ್ದಾರೆ.
ಏರುತ್ತಿದೆ ಮದ್ಯದ ಕಿಕ್!