ಮುದ್ದೇಬಿಹಾಳ: ಪಟ್ಟಣದಲ್ಲಿನ ಪಾನ್‌ಶಾಪ್ ಹಾಗೂ ಹೋಟೆಲ್‌ಗಳ ಮೇಲೆ ತಾಲೂಕು ಆರೋಗ್ಯಾಧಿಕಾರಿ ಡಾ. ಸತೀಶ ತಿವಾರಿ ನೇತೃತ್ವದಲ್ಲಿ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕು ತನಿಖಾ ದಳ ಸದಸ್ಯರು ದಾಳಿ ನಡೆಸಿ ಕೊಟ್ಪಾ ಕಾಯ್ದೆಯಡಿ ದಂಡ ವಿಧಿಸಲಾಯಿತು.
ಪಟ್ಟಣದ ವೃತ್ತದಿಂದ ಆಲಮಟ್ಟಿ ರಸ್ತೆವರೆಗೆ ಹಾಗೂ ಮುಖ್ಯರಸ್ತೆ ಬಜಾರ್ ಮಾರ್ಗ ಮಧ್ಯೆದಲ್ಲಿನ ಪಾನ್‌ಶಾಪ್ ಹಾಗೂ ಹೊಟೇಲ್‌ಗಳ ಮೇಲೆ ದಾಳಿ ನಡೆಸಿದರಲ್ಲದೆ, ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿ ಮಾಲೀಕರಿಗೆ, ವ್ಯಾಪಾರಸ್ಥರಿಂದ 3700 ರೂ. ದಂಡ ವಸೂಲಿ ಮಾಡಿ ಒಟ್ಟು 10 ಪ್ರಕರಣ ದಾಖಲಿಸಿಕೊಂಡರು. ಸೆಕ್ಷನ್ 4 ಮತ್ತು 6(ಎ)ಗಳ ನಾಮಲಕಗಳನ್ನು ಅಳವಡಿಸಿ ತಂಬಾಕು ಉತ್ಪನ್ನಗಳ ಜಾಹಿರಾತು ಲಕಗಳನ್ನು ತೆರವುಗೊಳಿಸಲಾಯಿತು.
ದಾಳಿಯಲ್ಲಿ ಅಬಕಾರಿ ಮುಖ್ಯ ಪೇದೆ ಬಿ. ಎಸ್. ತಡಕಲ್, ಗೃಹ ರಕ್ಷಕ ಶರಣು ಹೆಬ್ಬಾಳ, ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಯಲ್ಲಪ್ಪ ಚಲವಾದಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಂ. ಎಸ್. ಗೌಡರ, ಆರ್. ಎಸ್. ಸಜ್ಜನ. ಇಸ್ಮಾಯಿಲ್ ವಾಲಿಕಾರ ಹಾಗೂ ಪುರಸಭೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.