More

    ರೈತರಿಗೆ ಆರ್ಥಿಕ ನೆರವು ದೊರೆಯುವಂತಾಗಲಿ

    ಮಾನ್ವಿ: ರೈತರ ಆಥಿರ್ಕಕ ಮಟ್ಟ ಸುಧಾರಣೆಗೆ ಸಹಕಾರಿ ಸಂಘಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದರು.

    ತಾಲೂಕಿನ ನಕ್ಕುಂದಿ ಗ್ರಾಮದಲ್ಲಿ ಭಾನುವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನೂತನ ಆಡಳಿತ ಕಚೇರಿ ಹಾಗೂ ಗೋದಾಮು ಕಟ್ಟಡ ಉದ್ಘಾಟಿಸಿ ಮಾತನಾಡಿದರು.

    ಆರ್ಥಿಕ ನೆರವು

    ರೈತರು ಬೆಳೆ ಬೆಳೆಯಲು ಬಡ್ಡಿ ರಹಿತ ಸಾಲ ಸೌಲಭ್ಯ ಶೇ. 4 ರ ಬಡ್ಡಿಯಲ್ಲಿ ಸಾಲವನ್ನು ಸರ್ಕಾರದ ಸಹಕಾರಿಗಳು ನೀಡುತ್ತಿವೆ. ಗ್ರಾಮಗಳು ಅಭಿವೃದ್ಧಿ ಹೊಂದಬೇಕಾದರೆ ಗ್ರಾಮದಲ್ಲಿ ಶಾಲೆ, ಗ್ರಾಪಂ, ಸಹಕಾರಿ ಸಂಘ ಅವಶ್ಯವಾಗಿ ಇರಬೇಕು. ಈ ಭಾಗದಲ್ಲಿ ಸಹಕಾರಿ ಸಂಘಗಳು ಬೆಳೆಯುವುದಕ್ಕೆ ಹಿರಿಯ ಸಹಕಾರಿ ಧುರೀಣ ಭೂಪನಗೌಡ ಪಾಟೀಲ್‌ರ ಶ್ರಮವಿದೆ. ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಜಿಲ್ಲಾ ಆರ್‌ಡಿಸಿಸಿ ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತ ಬಂದಿದೆ. ಸಹಕಾರಿ ವ್ಯಾಪ್ತಿಯಲ್ಲಿನ ಎಲ್ಲ ಸಾಮಾನ್ಯ ರೈತರಿಗೂ ಅಗತ್ಯವಾದ ಆಥಿರ್ಕಕ ನೆರವು ಸಹಕಾರಿ ಸಂಘಗಳಿಂದ ದೊರೆಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಬರ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಿ

    ಮೂಲಸೌಲಭ್ಯಗಳ ಅಭಿವೃದ್ಧಿಗೆ ಕೆಕೆಆರ್‌ಡಿಬಿ ಯೋಜನೆಯಡಿ ಮಂಜೂರು ಮಾಡಿಸಲು ಅಗತ್ಯ ಕ್ರೀಯಾ ಯೋಜನೆ ತಯಾರಿಸಿ ಕಳುಹಿಸಲಾಗುತ್ತಿದೆ ಎಂದರು.

    ಶಾಸಕ ಹಂಪಯ್ಯ ನಾಯಕ ಮಾತನಾಡಿ, ಸಹಕಾರಿ ಸಂಘಗಳಿಂದ ಮಾತ್ರ ರೈತರಿಗೆ ಅಗತ್ಯವಾದ ಆರ್ಥಿಕ ನೆರವು ದೊರೆಯಲು ಸಾಧ್ಯ. ಪ್ರಾಮಾಣಿಕವಾಗಿ ಸರ್ಕಾರದ ಸೌಲಭ್ಯವನ್ನು ರೈತರಿಗೆ ತಲುಪಿಸಿ ಗ್ರಾಮದಲ್ಲಿನ ಶಾಲೆಗೆ ಅಗತ್ಯವಿರುವ ಹೆಚ್ಚುವರಿ 2ಕೊಠಡಿಗಳ ನಿರ್ಮಾಣಕ್ಕೆ ಈಗಾಗಲೇ 27ಲಕ್ಷ ರೂ. ಮಂಜೂರು ಮಾಡಲಾಗಿದೆ. ನಕ್ಕುಂದಿ ಗ್ರಾಮದಿಂದ ಗವಿಗಟ್ ಗ್ರಾಮಕ್ಕೆ ಹೋಗುವ ರಸ್ತೆಯ ಮಧ್ಯದಲ್ಲಿನ ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಸಹಕಾರಿಗಳಾದ ಅಮರಪ್ಪ, ಶಂಕರಪ್ಪ ದಾದ್ಮಿ, ಕಾರ್ಯದರ್ಶಿ ಶರಣಬಸವ, ತಹಸೀಲ್ದಾರ್ ರಾಜು ಪಿರಂಗಿ, ತಾಪಂ ಇಒ ಎಂ.ಡಿ.ಸೈಯದ್ ಪಟೇಲ, ಗ್ರಾಪಂ ಅಧ್ಯಕ್ಷೆ ಶಾರದಮ್ಮ, ಟಿಎಪಿಎಂಸಿಎಂಎಸ್.ಅಧ್ಯಕ್ಷ ತಿಮ್ಮರೆಡ್ಡಿ ಭೋಗಾವತಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸಲೀಂಪಾಷಾ, ಸಹಕಾರ ಸಂಘಗಳ ಉಪನಿಬಂಧಕ ಮನೋಹರ್ ಎಂ.ಆರ್, ಉಪಾಧ್ಯಕ್ಷ ಹನುಮಯ್ಯ, ನಿರ್ದೇಶಕರಾದ ದೇವಮ್ಮ, ಮುಖಂಡರಾದ ಶರಣಪ್ಪಗೌಡ ನಕ್ಕುಂದಿ, ರಾಜಾ ವಸಂತನಾಯಕ, ಬಾಲಸ್ವಾಮಿ ಕೊಡ್ಲಿ ಇನ್ನಿತರರು ಇದ್ದರು.

    2ಮಾನ್ವಿ02-

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts