blank

ತಮಿಳರ ಭವನಕ್ಕೆ ಆರ್ಥಿಕ ನೆರವು

blank

ಕೆ.ಆರ್.ನಗರ: ಕರ್ನಾಟಕ ತಮಿಳರ ಸಂಘದ ವತಿಯಿಂದ ಕೆ.ಆರ್.ನಗರ ಪಟ್ಟಣದ ಆಂಜನೇಯ ಬಡಾವಣೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನಕ್ಕೆ ವೈಯಕ್ತಿಕವಾಗಿ ಒಂದು ಲಕ್ಷ ರೂ. ದೇಣಿಗೆ ನೀಡುತ್ತೇನೆ ಎಂದು ಪುರಸಭೆ ಅಧ್ಯಕ್ಷ ಶಿವುನಾಯಕ್ ಹೇಳಿದರು.

ಸಂಘದ ನಿವೇಶನದ ಆವರಣದಲ್ಲಿ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಂಘದ ಭವನ ನಿರ್ಮಾಣಕ್ಕೆ ಶಾಸಕ ಡಿ.ರವಿಶಂಕರ್ ಅವರ ಶಾಸಕರ ನಿಧಿನಿಂದ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು. ಅಲ್ಲದೆ ಭವನ ನಿರ್ಮಾಣ ಮಾಡಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಪುರಸಭೆ ವತಿಯಿಂದ ಸರ್ಕಾರಿ ನಿವೇಶನ ಪಡೆದಿರುವ ಸಂಘ ಎಲ್ಲ ದಾಖಲಾತಿಗಳನ್ನು ಹೊಂದಿರುವುದರಿಂದ ಸರ್ಕಾರದಿಂದ ಅನುದಾನ ಪಡೆಯಲು ಯಾವುದೇ ತೊಂದರೆಯಿಲ್ಲ. ಆದ್ದರಿಂದ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗಳು ಮತ್ತು ಶಾಸಕರು ಸೇರಿದಂತೆ ವಿಧಾನ ಪರಿಷತ್ ಸದಸ್ಯರಿಗೆ ಮನವಿ ಸಲ್ಲಿಸಿ ಅನುದಾನ ಪಡೆದು ಭವನ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳಲ್ಲಿರುವ ಸುಮಾರು 5 ಸಾವಿರ ಜನ ತಮಿಳು ಭಾಷಿಕರು ಸಂಘ ಸ್ಥಾಪನೆ ಮಾಡಿಕೊಂಡಿರುವುದೇ ಹೆಮ್ಮೆ ಪಡುವ ವಿಚಾರವಾಗಿದ್ದು, ನೀವುಗಳು ಸಂಘದ ಕಾರ್ಯ ಚಟುವಟಿಕೆ ನಡೆಸಲು ಮತ್ತು ಸಣ್ಣಪುಟ್ಟ ಶುಭಾ ಸಮಾರಂಭ ಮಾಡಲು ಭವನದ ಅವಶ್ಯಕತೆಯಿದ್ದು ಇದರ ನಿರ್ಮಾಣಕ್ಕೆ ಎಲ್ಲರೂ ಕಂಕಣಬದ್ಧ್ದರಾಗಬೇಕು ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಕೆ.ಆರ್.ಶ್ರೀನಿವಾಸ್ ಮಾತನಾಡಿ, ಶಾಸಕ ಡಿ.ರವಿಶಂಕರ್ ಮತ್ತು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರಿಗೆ ನುದಾನ ನೀಡಿ ಭವನ ನಿರ್ಮಾಣಕ್ಕೆ ಸಹಕಾರ ನೀಡುವಂತೆ ಕೋರಲಾಗಿದ್ದು, ಪುರಸಭೆ ವತಿಯಿಂದಲೂ ಸಹಕಾರ ನೀಡಬೇಕು ಎಂದು ಅಧ್ಯಕ್ಷರಲ್ಲಿ ಮನವಿ ಮಾಡಿಕೊಂಡರು.

ಪುರಸಭೆ ಸದಸ್ಯ ಶಂಕರ್‌ಸ್ವಾಮಿ, ಮಾಜಿ ಸದಸ್ಯರಾದ ಮಾಣಿಕ್ಯಂರವಿ, ಕೆ.ವಿನಯ್, ಸಂಘದ ಉಪಾಧ್ಯಕ್ಷರಾದ ರಾಮದಾಸ್, ಆರ್ಮುಗಂ, ಪ್ರಧಾನ ಕಾರ್ಯದರ್ಶಿ ಆರ್.ಲೋಕನಾಥ್, ಪದಾಧಿಕಾರಿಗಳಾದ ಎಚ್.ಎಂ.ರವಿ, ಮಣಿಕಂಠ, ನಾಗೇಂದ್ರ, ಸುರೇಶ್, ವೆಂಕಟೇಶ್, ಮುರುಗೇಶ್, ಕೆ.ರವಿ, ಕುಮಾರ್, ಗಣೇಶ್, ಏಳುಮಲೈ ಇತರರಿದ್ದರು.

 

Share This Article

ಬೇಸಿಗೆಯಲ್ಲಿ ಗುಂಗುರು ಕೂದಲಿನ ಆರೈಕೆ ಮಾಡುವುದು ಹೇಗೆ ಗೊತ್ತಾ? curly hair

curly hair: ಗುಂಗುರು ಕೂದಲು ತುಂಬಾ ಸುಂದರವಾಗಿ ಕಾಣುತ್ತದೆ, ಇದಕ್ಕೆ ಸರಿಯಾದ ಆರೈಕೆಯ ಅಗತ್ಯವಿರುತ್ತದೆ. ನೀವು…

ಅಪ್ಪಿತಪ್ಪಿಯೂ ಈ ದಿನ ಪೊರಕೆಯನ್ನು ಖರೀದಿಸಬೇಡಿ! ಖಂಡಿತ ತೊಂದರೆಗೆ ಸಿಲುಕುತ್ತೀರಿ.. broom

broom: ಹಿಂದೂಗಳು ಪೊರಕೆಯನ್ನು ಲಕ್ಷ್ಮಿ ದೇವಿಯ ಸಾಕಾರವೆಂದು ಪರಿಗಣಿಸುತ್ತಾರೆ. ಭಕ್ತರು ಲಕ್ಷ್ಮಿ ದೇವಿಯು ಪೊರಕೆಗಳಲ್ಲಿ ವಾಸಿಸುತ್ತಾಳೆ…

ಜೈಲುಗಳಲ್ಲಿ ಕೈದಿಗಳಿಗೆ ವಿಶೇಷ ‘ಲೈಂಗಿಕ ಕೊಠಡಿಗಳು’! Prison

Prison: ಇಟಲಿ ಸರ್ಕಾರ ಒಂದು ವಿನೂತನ ನಿರ್ಧಾರ ತೆಗೆದುಕೊಂಡಿದೆ. ಕೈದಿಗಳ ಗೌಪ್ಯತೆಯ ಹಕ್ಕುಗಳನ್ನು ಗೌರವಿಸಿ, ಇಟಲಿ…