ಲಕ್ಷ್ಮೇಶ್ವರ: ಸಮಾಜದಲ್ಲಿ ಸುಮಾರು 21 ಸಾವಿರಕ್ಕೂ ಅಧಿಕ ಜನರಿಗೆ ವಿವಿಧ ಮಾಸಾಶನಗಳನ್ನು ನೀಡುವುದರ ಜತೆಗೆ ನಿರಾಶ್ರಿತರಿಗೆ ಮನೆ ನಿರ್ಮಾಣ, ಅಪಘಾತಕ್ಕೊಳಗಾದವರಿಗೆ ಚಿಕಿತ್ಸೆ, ಕೆರೆ ಹೂಳೆತ್ತುವ, ದೇವಸ್ಥಾನಗಳ ನಿರ್ಮಾಣಕ್ಕೆ ಪ್ರಸಾದ ರೂಪದಲ್ಲಿ ಸಹಾಯಧನ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಧಗ್ರಾ ಯೋಜನೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಹೇಳಿದರು.

ರಸ್ತೆ ಅಪಘಾತದಲ್ಲಿ ಗಾಯಗೊಂಡ ಪಟ್ಟಣದ ಹಳ್ಳದಕೇರಿ ಕಾರ್ಯಕ್ಷೇತ್ರದ ಶ್ರೀ ಜ್ಯೋತಿರ್ಲಿಂಗ ತಂಡದ ಸದಸ್ಯ ನಾಗರಾಜ ಶಿರಹಟ್ಟಿ ಅವರಿಗೆ ಮಂಗಳವಾರ ಸಹಾಯಧನದ ಚೆಕ್ ವಿತರಿಸಿ ಅವರು ಮಾತನಾಡಿದರು.
ಯೋಜನಾಧಿಕಾರಿ ಪುನೀತ ಓಲೇಕಾರ, ವಲಯ ಮೇಲ್ವಿಚಾರಕಿಯರಾದ ರೇಣುಕಾ, ಶ್ರುತಿ, ಸೇವಾ ಪ್ರತಿನಿಧಿ ನಿರ್ಮಲಾ ಇದ್ದರು.