ವೈದ್ಯಕೀಯ ತಪಾಸಣೆಗಾಗಿ ಯುಎಸ್​ಗೆ ತೆರಳಿದ ಅರುಣ್​ ಜೇಟ್ಲಿ

ನವದೆಹಲಿ: ಕಳೆದ ವರ್ಷ ಮೇನಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ ಅನಿರೀಕ್ಷಿತವಾಗಿ ವೈದ್ಯಕೀಯ ತಪಾಸಣೆಗಾಗಿ ಯುಎಸ್​ಗೆ ತೆರಳಿದ್ದಾರೆ.

ವೈದ್ಯಕೀಯ ತಪಾಸಣೆಗಾಗಿ ಭಾನುವಾರ ರಾತ್ರಿಯೇ ಯುಎಸ್​ಗೆ ಹೋಗಿದ್ದಾರೆ. ಫೆ.1ರಂದು ಕೇಂದ್ರ ಸರ್ಕಾರದ ಕೊನೇ ಬಜೆಟ್​ ಮಂಡನೆಯಾಗಲಿದ್ದು ಅಂದು ಜೇಟ್ಲಿ ಹಾಜರಾಗಲೇಬೇಕಾಗಿದೆ. ಇದು ಅವರ ಆರನೇ ಆಯವ್ಯಯ ಮಂಡನೆಯಾಗಿದೆ.

2018ರ ಏಪ್ರಿಲ್​ನಲ್ಲಿ ಅರುಣ್​ ಜೇಟ್ಲಿ ಕಿಡ್ನಿ ಸಮಸ್ಯೆಯಿಂದ ಏಮ್ಸ್​ಗೆ ದಾಖಲಾಗಿದ್ದರು. ನಂತರ ಮೇ 14ರಂದು ಅವರಿಗೆ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಆಗ ರೈಲ್ವೆ ಸಚಿವರಾಗಿದ್ದ ಪಿಯುಷ್​ ಗೋಯಲ್​ ಅವರಿಗೇ ಹಣಕಾಸು ಖಾತೆಯನ್ನು ವಹಿಸಲಾಗಿತ್ತು.