ಸಿನಿಮಾ

ಹೊಟೇಲ್‌ನಲ್ಲಿ ಶವವಾಗಿ ಪತ್ತೆಯಾದ ಸಿನಿಮಾ ನಿರ್ದೇಶಕ

ಸೋನ್​ಭದ್ರ: ಚಿತ್ರೀಕರಣಕ್ಕೆಂದು ತೆರಳಿದ್ದ ಸಿನಿಮಾ ನಿರ್ದೇಶಕನೊಬ್ಬ ಹೊಟೇಲ್​ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಸೋನ್​ಭದ್ರದಲ್ಲಿ ನಡೆದಿದೆ.

ಮೃತ ಸುಭಾಷ್​ಚಂದ್ರ ತಿವಾರಿ ಭೋಜ್‌ಪುರಿ ಚಲನಚಿತ್ರ ನಿರ್ದೇಶಕನಾಗಿದ್ದು, ಮಹಾರಾಷ್ಟ್ರ ಮೂಲದವ. ಬುಧವಾರ ದಿನದಂದು ಸಿನಿಮಾ ಚಿತ್ರೀಕರಣ ವೇಳೆ ಸುಭಾಷ್​ ಹಾಗೂ ಚಿತ್ರ ತಂಡ ಸೋನ್​ಭದ್ರದ ಹೊಟೇಲ್‌ನಲ್ಲಿ ತಂಗಿದ್ದರು. ಅದೇ ರಾತ್ರಿ ಸುಭಾಷ್​ ಶವವಾಗಿ ಪತ್ತೆಯಾಗಿದ್ದಾನೆ.

ಇದನ್ನೂ ಓದಿ: ಇದು ರಿವರ್ಸ್ ಗೇರ್ ಸರ್ಕಾರ; ಬಸವರಾಜ ಬೊಮ್ಮಾಯಿ

“ಸುಭಾಷ್​ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಶವವನ್ನು ವಶಕ್ಕೆ ಪಡೆದಿದ್ದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಹೆಚ್ಚಿನ ತನಿಖೆ ನಡೆಸಲಾಗುವುದು” ಎಂದು ಪೊಲೀಸರು ತಿಳಿಸಿದ್ದಾರೆ.

ಬಧಾಯಿ ದೋ, ಓಂ ಶಾಂತಿ ಓಂ ಮತ್ತು ಖೋಸ್ಲಾ ಕಾ ಘೋಸ್ಲಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ನಿತೇಶ್, ಹಲವಾರು ಶೋಗಳಲ್ಲಿ ಕಾಣಿಸಿಕೊಂಡಿದ್ದರು.(ಏಜೆನ್ಸೀಸ್​)

Latest Posts

ಲೈಫ್‌ಸ್ಟೈಲ್