ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಎಂದರೆ ಅವರ ಸಿನಿಮಾಗಳಿಗಿಂತಲೂ ಮೊದಲು ನೆನಪಾಗುವುದೇ ವಿವಾದಗಳು. ಚಿತ್ರರಂಗ ಮತ್ತು ರಾಜಕೀಯದಲ್ಲಿ ಏನೇ ಬೆಳವಣಿಗೆಗಳು ನಡೆದರೂ ಅದಕ್ಕೆ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುವ ಅವರು ಒಂದಿಲ್ಲೊಂದು ಕಾಂಟ್ರೊವರ್ಸಿ ಮೈಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ.
ಅಷ್ಟೇ ಅಲ್ಲ, ಸಿನಿಮಾ ಮತ್ತು ರಾಜಕೀಯದಲ್ಲಿ ಪ್ರಸಿದ್ಧರಾದ ವ್ಯಕ್ತಿಗಳ ಬಯೋಪಿಕ್ ಮಾಡಿ, ಆ ಮೂಲಕ ಕೆಲವು ಸತ್ಯಗಳನ್ನು ಬಯಲಿಗೆ ಎಳೆಯುವುದರಲ್ಲೂ ಅವರು ಫೇಮಸ್. ಆಂಧ್ರಪ್ರದೇಶದ ಮಾಜಿ ಮುಖ್ಯಮುಂತ್ರಿ, ತೆಲುಗು ಚಿತ್ರರಂಗದ ದಿಗ್ಗಜ ನಟ ಎನ್.ಟಿ. ರಾಮರಾವ್ ಕುರಿತು, ‘ಲಕ್ಷ್ಮೀಸ್ ಎನ್ಟಿಆರ್’ ಸಿನಿಮಾ ಮಾಡಿದ್ದ ಆರ್ಜಿವಿ, ನಂತರ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಬಯೋಪಿಕ್ ಅನ್ನು ‘ಟೈಗರ್’ ಹೆಸರಿನಲ್ಲಿ ನಿರ್ದೇಶನ ಮಾಡುವುದಾಗಿ ಘೋಷಿಸಿ ಕೊಂಡರು.
ಅಷ್ಟಕ್ಕೇ ಮುಗಿಯಲಿಲ್ಲ.. ಸಂಜಯ್ ದತ್, ಬ್ರೂಸ್ಲೀ, ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಆಪ್ತೆ ಶಶಿಕಲಾ ಮುಂತಾದವರ ಜೀವನದ ಕುರಿತಾಗಿ ಸಿನಿಮಾ ಮಾಡುವುದಾಗಿಯೂ ವರ್ವ ಹೇಳಿಕೊಂಡಿದ್ದಾರೆ. ಅಸಲಿ ಟ್ವಿಸ್ಟ್ ಏನೆಂದರೆ, ಈಗ ಆರ್ಜಿವಿ ಜೀವನವನ್ನೇ ಬೆಳ್ಳಿಪರದೆಗೆ ತರಲು ಪ್ಲಾ್ನ್ ಸಿದ್ಧವಾಗುತ್ತಿದೆ.
ಹಾಗೆಂದ ಮಾತ್ರಕ್ಕೆ ಅದರಲ್ಲಿ ಅವರ ಸಾಧನೆ ಬಗ್ಗೆ ಮಾಹಿತಿ ಇರುತ್ತದೆ ಎಂದುಕೊಳ್ಳುವಂತಿಲ್ಲ. ಬದಲಿಗೆ, ಅವರ ಕರಾಳ ಇತಿಹಾಸದ ಚಿತ್ರಣ ಇರಲಿದೆಯಂತೆ! ಹೌದು, ಹೀಗೊಂದು ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ತೆಲುಗು ಚಿತ್ರರಂಗದ ಹಿರಿಯ ಗೀತರಚನಾಕಾರ ಜೊನ್ನವಿತುಲ ರಾಮಲಿಂಗೇಶ್ವರ ರಾವ್ ಅವರು ಈ ಘೋಷಣೆ ಮಾಡಿದ್ದಾರೆ. ಇದಕ್ಕೂ ಮುನ್ನ ಹಲವು ಬಾರಿ ತಮಗೆ ಆರ್ಜಿವಿ ಬಗ್ಗೆ ಇರುವ ಅಸಮಾಧಾನವನ್ನು ಕಟುಮಾತುಗಳಿಂದಲೇ ರಾಮಲಿಂಗೇಶ್ವರ ರಾವ್ ವ್ಯಕ್ತಪಡಿಸಿದ್ದುಂಟು.
ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಆರ್ಜಿವಿ ಏನಾಗಿದ್ದರು? ಅವರ ಕರಾಳ ಮುಖ ಹೇಗಿತ್ತು ಎಂಬುದನ್ನು ಸಿನಿಮಾ ಮೂಲಕ ಬಹಿರಂಗ ಪಡಿಸಲು ರಾಮಲಿಂಗೇಶ್ವರ ರಾವ್ ತೀರ್ವನಿಸಿದ್ದಾರಂತೆ. ಆರ್ಜಿವಿಯನ್ನೇ ಹೋಲುವ ಓರ್ವ ನಟನನ್ನೂ ಈಗಾಗಲೇ ಅವರು ಪತ್ತೆ ಹಚ್ಚಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ‘ಪಪು್ಪ ವರ್ವ’ ಎಂದು ಹೆಸರಿಡುವ ಸಾಧ್ಯತೆ ಇದೆಯಂತೆ! (ಏಜೆನ್ಸೀಸ್)