ಕಡತ ವಿಲೇವಾರಿ ಆಂದೋಲನ

ಮೈಸೂರು: ರಜೆ ದಿನವಾದ ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಡತ ವಿಲೇವಾರಿ ಆಂದೋಲನ ನಡೆಯಿತು.
ಡಿಸಿ ಕಚೇರಿಯ ಸಿಬ್ಬಂದಿ ಎಂದಿನಂತೆ ಇಂದು ಕೂಡ ಕರ್ತವ್ಯ ನಿರ್ವಹಣೆ ಮಾಡಿ ಬಾಕಿ ಕಡತಗಳನ್ನು ವಿಲೇವಾರಿ ಮಾಡಿದರು.
ಕಂದಾಯ ಸಚಿವ ಆರ್.ವಿ.ದೇಶಪಾಂಡೆ ನಿರ್ದೇಶನ ಮೇರೆಗೆ ಎಲ್ಲ ಜಿಲ್ಲೆಗಳಲ್ಲಿ ಈ ಆಂದೋಲನ ನಡೆಯುತ್ತಿದೆ. ಅದರಂತೆ ಇಲ್ಲಿಯೂ ಸಂಬಂಧಪಟ್ಟ ಸಿಬ್ಬಂದಿ, ಅಧಿಕಾರಿಗಳು ಕೆಲಸಕ್ಕೆ ಹಾಜರಾಗಿ ಕಡತ ವಿಲೇವಾರಿ ಕೆಲಸವನ್ನು ಸಂಜೆವರೆಗೆ ಮಾಡಿದರು.