Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಸ್ಫೋಟಕ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ ತಮ್ಮ ನಿವೃತ್ತಿ ಬಗ್ಗೆ ಏನಂದ್ರು?

Tuesday, 13.02.2018, 8:06 PM       No Comments

ಮುಂಬೈ: ಕಳೆದ ಕೆಲ ವರ್ಷಗಳಿಂದ ಫಾರ್ಮ್ ಕಳೆದುಕೊಂಡು ತಂಡದಿಂದ ಹೊರಗುಳಿದಿರುವ ಭಾರತ ಕ್ರಿಕೆಟ್‌ ತಂಡದ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್(36) ತಮ್ಮ ನಿವೃತ್ತಿ ಕುರಿತು ಇದೇ ಮೊದಲ ಬಾರಿಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಅವರು, ಭಾರತಕ್ಕಾಗಿ ಆಡುವುದೇ ಹೆಮ್ಮೆಯ ಸಂಗತಿ, ಈಗಲೇ ವಿದಾಯ ಹೇಳುವುದು ನನಗಿಷ್ಟವಿಲ್ಲ. ನಾನಿನ್ನು ಐಪಿಎಲ್‌(ಇಂಡಿಯನ್‌ ಪ್ರೀಮಿಯರ್‌ ಲೀಗ್‌)ನ ಎರಡು, ಮೂರು ಸೀಸನ್‌ಗಳಲ್ಲಿ ಆಡುತ್ತೇನೆ. ನನ್ನಿಷ್ಟದ ಕ್ರೀಡೆಗೆ ಈಗಲೇ ವಿಷಾದದ ಮೂಲಕ ವಿದಾಯ ಹೇಳುವುದು ನನಗಿಷ್ಟವಿಲ್ಲ. ಮತ್ತೊಂದಷ್ಟು ವರ್ಷ ತಂಡಕ್ಕಾಗಿ ಆಡುವುದು ನನ್ನ ಗುರಿಯಾಗಿದೆ ಎಂದು ತಿಳಿಸಿದರು.

ನನ್ನ ಮನಸ್ಸಿಗೆ ಸಾಕು ಎನಿಸಿದಾಗ ನಾನೇ ಖುದ್ದಾಗಿ ವಿದಾಯ ಘೋಷಿಸುತ್ತೇನೆ. ಈಗ ನನ್ನ ಮನಸ್ಸಿನಲ್ಲಿ ವಿದಾಯದ ಮಾತಿಲ್ಲ. ಇವಾಗೇನಿದ್ದರೂ ಉತ್ತಮ ಪ್ರದರ್ಶನದ ಮೂಲಕ ತಂಡಕ್ಕೆ ಮರಳಬೇಕು ಎಂದುಕೊಂಡಿದ್ದೇನೆ. ಕ್ರಿಕೆಟ್‌ ಅನ್ನು ನಾನು ಪ್ರೀತಿಸುತ್ತೇನೆ. ಹಾಗಾಗಿ ನಾನಿನ್ನು ಆಡಲು ಬಯಸುತ್ತೇನೆ. ಭಾರತ ದೇಶಕ್ಕಾಗಿ ಆಡುವುದೇ ನನಗೆ ಸ್ಫೂರ್ತಿಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಕಠಿಣ ಪರಿಸ್ಥಿತಿಗಳಲ್ಲಿ ಹೋರಾಡಿ ಬಂದ ನನ್ನ ಪಯಣ ಸುಂದರವಾಗಿದೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಜನರಿಗೆ ಅಥವಾ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ಶಕ್ತಿಯಾಗಿ ನಿಲ್ಲಲು ನಾನು ಬಯಸುತ್ತೇನೆ. ನಾನು ಭಾರತಕ್ಕಾಗಿ ಆಡುತ್ತೇನೋ ಇಲ್ಲವೋ ತಿಳಿದಿಲ್ಲ. ಆದರೆ, ಮೈದಾನಕ್ಕೆ ಇಳಿದರೆ ಶೇ. 100 ರಷ್ಟು ಉತ್ತಮ ಆಟದ ಭರವಸೆ ನೀಡಬಲ್ಲೆ ಎಂದಿದ್ದಾರೆ.

ಬಡ ಮಕ್ಕಳಿಗೆ ಕ್ರಿಕೆಟ್‌ ತರಬೇತಿ ನೀಡುವುದು ತನ್ನ ಇಚ್ಛೆಯಾಗಿದ್ದು, ಕ್ರೀಡೆ ಮತ್ತು ಶಿಕ್ಷಣವನ್ನು ಸಮನಾಗಿ ತೆಗೆದುಕೊಂಡು ಹೋಗಲು ನೆರವಾಗುವ ಇಂಗಿತ ಅವರದು. ಇದೇ ವೇಳೆ ತಮ್ಮ ವಿದಾಯದ ಬಳಿಕ ನಾನಂತೂ ವೀಕ್ಷಕ ವಿವರಣೆಗಾರನಾಗುವುದಿಲ್ಲ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top