ಹೋರಾಟ ಸ್ಥಳಕ್ಕೆ ನಾಗಾ ಸಾಧುಗಳ ಭೇಟಿ

ಅಥಣಿ: ಕೃಷ್ಣಾ ನದಿ ಹೋರಾಟ ಸಮಿತಿ ನಾಲ್ಕು ದಿನಗಳಿಂದ ನಡೆಸುತ್ತಿರುವ ಹೋರಾಟ ಸ್ಥಳಕ್ಕೆ ಭೇಟಿ ನೀಡಿದ ನಾಗಾ ಸಾಧುಗಳು ಭೇಟಿ ನೀಡಿ ಉಭಯ ಸರ್ಕಾರಗಳು ಪರಸ್ಪರ ಚರ್ಚಿಸಿ ನದಿಗೆ ನೀರು ಹರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರವೇ ತಾಲೂಕಾಧ್ಯಕ್ಷ ಬಸನಗೌಡ ಪಾಟೀಲ (ಬಮ್ನಾಳ) ಮಾತನಾಡಿ, ಕೊಯ್ನ ಜಲಾಶಯದಿಂದ 4 ಟಿಎಂಸಿ ನೀರು ಹರಿಸಬೇಕು. ಆಗ ಮಾತ್ರ ನದಿ ನೀರಿನ ಸಮಸ್ಯೆ ಬಗೆ ಹರಿಸಲು ಸಾಧ್ಯ.ಮೂರು ತಿಂಗಳಿನಿಂದ ನದಿ ನೀರು ಬತ್ತಿದ್ದರೂ ಕೂಡ ಮಹಾರಾಷ್ಟ್ರ ಸರ್ಕಾರದೊಂದಿಗೆ ಚರ್ಚಿಸದೆ ಇದ್ದುದರಿಂದ ಸಮಸ್ಯೆ ಉಲ್ಬಣಿಸಿದೆ ಎಂದ ಅವರು, ನೀರಿನ ಸಮಸ್ಯೆ ಬಗೆಹರಿಯದೆ ಇದ್ದಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.

ನ್ಯಾಯವಾದಿ ಸುನೀಲ ಸಂಕ ಮಾತನಾಡಿ, ಕೃಷ್ಣಾ ಹೋರಾಟ ಸಮಿತಿ ಮೂರು ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಸ್ಥಳೀಯ ನ್ಯಾಯವಾದಿಗಳ ಸಂಘದಿಂದ ಈಗಾಗಲೇ ಬೆಂಬಲ ನೀಡಿ ಪ್ರತಿಭಟನೆಯಲ್ಲೂ ಕೂಡ ವಕೀಲರು ಸಕ್ರೀಯವಾಗಿ ಭಾಗಿಯಾಗಿದ್ದಾರೆ ಎಂದರು.

ಹಿಡಕಲ್ ಜಲಾಶಯದ ಮೂಲಕ ಕೃಷ್ಣಾ ನದಿಗೆ ಹರಿಸಿದ ನೀರು ತಾತ್ಕಾಲಿಕವಾಗಿ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯ. ಆದರೆ ನಾವು ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸದೆ ಹೋದರೆ ಸಮಸ್ಯೆ ಇದೇ ರೀತಿ ಮುಂದುವರಿಯುತ್ತದೆ ಎಂದರು.

ವಿಜಯಕುಮಾರ ಅಡಹಳ್ಳಿ, ರಮೇಶ ಬಾದವಾಡಗಿ, ದೀಪಕ ಶಿಂಧೆ, ರಾಕೇಶ ಮೈಗೂರ, ಬಿಜೆಪಿ ಮುಖಂಡರಾದ ಸಂಗನಗೌಡ ಪಾಟೀಲ, ಪ್ರಕಾಶ ಮಹಾಜನ, ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಈರಣ್ಣ ಅಡಗಲ್ಲ, ನ್ಯಾಯವಾದಿಗಳಾದ ಎಸ್.ಎಸ್.ಪಾಟೀಲ, ಲೆನಿನ್ ಹಳಿಂಗಳಿ, ಬಿ.ಬಿ.ಬಿಸಲಾಪುರ, ನಿಂಗಪ್ಪ ಖೋಕಲೆ, ಪರಪ್ಪ ಬಿಸಗುಪ್ಪಿ, ಸುಭಾಶ ನಾಯಿಕ, ಸದಾನಂದ ಕಾಂಬಳೆ ಮತ್ತಿತರರಿದ್ದರು.

Leave a Reply

Your email address will not be published. Required fields are marked *