ಹಗರಿಬೊಮ್ಮನಹಳ್ಳಿ: ಚಿಕ್ಕವಯಸ್ಸಿನಲ್ಲೇ ಹೋರಾಟ ಮೈಗೂಡಿಸಿಕೊಂಡ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಪಿಂಜಾರ್‌ಹೆಗ್ಡಾಳ್ ಹುಟ್ಟೂರು ಆಗಿದ್ದರೂ, ಅನ್ಯಾಯಗಳನ್ನು ಕಂಡಾಗ ಅದರ ವಿರುದ್ಧ ಹೋರಾಟಕ್ಕೆ ಇಳಿಯುತ್ತಿದ್ದರು. ರೈತಪರ ಹೋರಾಟ ಮಾಡಿದವರನ್ನು ನೆನೆಯುತ್ತಾ, ಅವರ ಆದರ್ಶ ಜೀವನವನ್ನು ರೂಢಿಸಿಕೊಂಡು ರೈತರ ಕಷ್ಟಗಳಿಗೆ ಬೆನ್ನೆಲುಬಾಗಿ ನಿಂತವರಾಗಿದ್ದಾರೆ.
ಬಿ.ಎ, ಇವರು ಶಿಕ್ಷಣ ಪಡೆದದು,್ದ ಮೊದಲಿನಿಂದಲೂ ಸಂಘಜೀವಿ, ಸಂಘಟನೆಗಳೊಂದಿಗೆ ಬೆಳೆದು ಎಸ್‌ಎಫ್‌ಐ, ರೈತ ಸಂಘಟನೆ, ಜನಪರ ಸಂಘಟನೆ, ಎದ್ದೇಳು ಕರ್ನಾಟಕ ಸೇರಿದಂತೆ ಹಲವಾರು ಸಂಘಟನೆಗಳಲ್ಲಿ ಕೆಲಸ ಮಾಡಿದ್ದಾರೆ. ವಿದ್ಯುತ್‌ಗಾಗಿ ಹೋರಾಟ ಕೈಗೊಂಡಾಗ ಪೊಲೀಸ್ ಹಲ್ಲೆಯಲ್ಲಿ ಕಿಡ್ನಿ ವೈಫಲ್ಯವಾಯಿತು. ಜೀವನ್ಮರಣ ಹೋರಾಟದ ಸಂದರ್ಭದಲ್ಲಿ ಇವರ ಸಹೋದರ ಜೆ.ಎಂ.ರುದ್ರಮುನಿ ತಮ್ಮ ಕಿಡ್ನಿ ಕೊಟ್ಟು, ಸಾರ್ಥಕ ಜೀವನ ಮೆರೆದಿದ್ದಾರೆ.
ಕೆಂಪೇಗೌಡ, ಬೋಧಿ ಪ್ರಶಸ್ತಿ, 9ನೇ ಸಾಹಿತ್ಯ ಸಮ್ಮೇಳನಗಳಲ್ಲಿ ಸಂಶಿ ನಿಂಗಪ್ಪ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇಂದು ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ರಾಜ್ಯ ರೈತರಿಗೆ ಹಾಗೂ ನನ್ನೊಂದಿಗೆ ಸದಾ ಹೋರಾಟಕ್ಕೆ ಸಹಕರಿಸುತ್ತಾ ಮುಂಚುಣಿಯಲ್ಲಿದ್ದ ನನ್ನೆಲ್ಲಾ ಹೋರಾಟಗಾರರಿಗೆ ಸಿಕ್ಕ ಪ್ರಶಸ್ತಿಯಾಗಿದೆ ಎಂದು ವೀರಸಂಗಯ್ಯ ತಿಳಿಸಿದ್ದಾರೆ.