More

    ಜಿಲ್ಲಾ ಸಮ್ಮೇಳನಾಧ್ಯಕ್ಷ ಕಲ್ಕುಳಿ ವಿಠ್ಠಲ್ ಹೆಗ್ಡೆ ಆಯ್ಕೆ ವಿರೋಧಿಸಿ ಶೃಂಗೇರಿಯಲ್ಲಿ ಸ್ವಯಂಫೋಷಿತ ಬಂದ್

    ಶೃಂಗೇರಿ: ಶೃಂಗೇರಿಯ ಆದಿಚುಂಚನಗಿರಿ ಭವನದಲ್ಲಿ 16ನೇ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ದೊರೆತರೆ ಇತ್ತ ಸಮ್ಮೇಳನಾಧ್ಯಕ್ಷ ಕಲ್ಕುಳಿ ವಿಠ್ಠಲ್ ಹೆಗ್ಡೆ ಆಯ್ಕೆ ವಿರೋಧಿಸಿ ಪಟ್ಟಣದಲ್ಲಿ ಸ್ವಯಂಫೋಷಿತ ಬಂದ್ ನಡೆಸಲಾಯಿತು.

    ಕುವೆಂಪು ಬಸ್ ನಿಲ್ದಾಣದಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ ಉಳಿಸಿ ಹೋರಾಟ ಸಮಿತಿ ಸಂಚಾಲಕ ಎಚ್.ಎಸ್.ಸುಬ್ರಹ್ಮಣ್ಯ ಮಾತನಾಡಿ, ಸಮ್ಮೇಳನ ಮುಂದೂಡಬೇಕು ಎಂದು ಪೊಲೀಸರು ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್​ಗೆ ನೋಟಿಸ್ ನೀಡಿದ್ದರೂ ಸಮ್ಮೇಳನಕ್ಕೆ ಚಾಲನೆ ನೀಡಿ ಗೊಂದಲ ಸೃಷ್ಟಿಸಿದ ಅಶೋಕ್ ಕುಂದೂರು ಹಾಗೂ ಸಮಿತಿ ಸಹ ಕಾರ್ಯದರ್ಶಿ ಶ್ರೀಮಂದಾರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

    ಸ್ವಯಂಘೊಷಿತ ಬಂದ್: ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಫೋಷಿಸಲಾಗಿತ್ತು. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿದ್ದರಿಂದ ಗ್ರಾಹಕರು ಹಾಗೂ ಪ್ರವಾಸಿಗರು ಪರದಾಡಿದರು. ಬೆಳಗ್ಗೆ ಒಂದೆರಡು ಬಸ್​ಗಳು ಓಡಾಟ ನಡೆಸಿದ್ದರೂ ನಂತರ ಬಸ್ ಸಂಚಾರ ಸ್ಥಗಿತಗೊಂಡಿತ್ತು.

    ತಾಪಂ ಅಧ್ಯಕ್ಷೆ ಜಯಶೀಲಾ ಚಂದ್ರಶೇಖರ್, ಜಿಪಂ ಸದಸ್ಯರಾದ ಬಿ.ಶಿವಶಂಕರ್, ಶಿಲ್ಪಾ ರವಿ, ಪಪಂ ಸದಸ್ಯ ರತ್ನಾಕರ್, ರಾಧಿಕಾ ಜಯಕುಮಾರ್, ಶ್ರೀವಿದ್ಯಾ, ಬಿಜೆಪಿ ತಾಲೂಕು ಅಧ್ಯಕ್ಷ ತಲಗಾರು ಉಮೇಶ್, ಮುಖಂಡರಾದ ಎ.ಎಸ್.ನಯನ, ವೆಂಕಟೇಶ್ ಭಟ್, ಹರೀಶ್ ಶೆಟ್ಟಿ, ವೇಣುಗೋಪಾಲ್, ಅಂಬ್ಲೂರು ರಾಮಕೃಷ್ಣ , ಎಂ.ಎಸ್.ರಂಗನಾಥ್, ಕಚ್ಚೋಡಿ ಶ್ರೀನಿವಾಸ್, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗ್ಯಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts