ಜಗಳೂರು: ಅಡಕೆ ಗಿಡಕ್ಕೆ ಹರಿಸಿದ ನೀರು ರಸ್ತೆಗೆ ಬಂದ ಹಿನ್ನೆಲೆಯಲ್ಲಿ ತಾಲೂಕಿನ ಮಿನಿಗರಹಳ್ಳಿಯಲ್ಲಿ ಎರಡು ಗುಂಪುಗಳ ನಡುವೆ ಶನಿವಾರ ನಡೆದ ಮಾರಾಮಾರಿಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಕಾರಣ ಗ್ರಾಮದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ.

ಗ್ರಾಮದ ಹಾಲಮ್ಮ ಎಂಬುವರು ತಮ್ಮ ಮನೆ ಮುಂಭಾಗ ಬೆಳೆಸಿದ್ದ ಅಡಕೆ ಸಸಿಗೆ ಮನೆಯ ನೀರು ಹರಿದು ಹೋಗುವಂತೆ ಮಾಡಿದ್ದರು. ಈ ನೀರು ರಸ್ತೆಗೆ ಹರಿದು ಬಂದಿದ್ದಕ್ಕೆ ಕಬ್ಬಳ್ಳಿ ಬಸವರಾಜಪ್ಪ ಎಂಬುವರು ಆಕ್ಷೇಪಿಸಿದ್ದರು. ಇದೇ ವಿಚಾರವಾಗಿ ಮಾತಿನ ಚಕಮಕಿ ನಡೆದು, ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆಯಿತು.
ಎರಡೂ ಕಡೆಯವರು ಕಲ್ಲು-ಬಡಿಗೆ, ಕಣಗ ತೆಗೆದುಕೊಂಡು ಹೊಡೆದಾಡಿದರು. ಗಾಯಗೊಂಡ ಹಾಲಮ್ಮ, ರಮೇಶ್, ನಾಗರಾಜ್, ಶೇಖರಪ್ಪ, ಮಲ್ಲೇಶ್, ಬಸವರಾಜ್, ಗಿರಿಜಮ್ಮ, ಕಲ್ಲೇಶ್, ಶಿವಮ್ಮ ಇವರನ್ನು ಜಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಜ್ಯದಲ್ಲಿ ಇನ್ನೂ ಎರಡು ವಾರ ನೈಟ್ ಕರ್ಫ್ಯೂ; ಕರೊನಾ ಆತಂಕ ಹೆಚ್ಚಳ, ಮತ್ತಷ್ಟು ಕಟ್ಟುನಿಟ್ಟು…
‘ತಂದೆಗೆ ಒಳ್ಳೆಯ ಮಗಳಾಗಲಿಲ್ಲ, ಗಂಡನಿಗೆ ತಕ್ಕ ಹೆಂಡತಿಯಾಗಲಿಲ್ಲ..’: ಮೋಹನಕುಮಾರಿ ಇನ್ನಿಲ್ಲ…