ಕಠಾರಿಪಾಳ್ಯದಲ್ಲಿ ಕಠೋರ ಹೊಡೆದಾಟ, ಐವರಿಗೆ ಗಾಯ; ಜಿಲ್ಲಾಸ್ಪತ್ರೆಯ ವಾರ್ಡ್​ನೊಳಗೂ 2 ಗುಂಪುಗಳ ಮಾರಾಮಾರಿ

ಕೋಲಾರ: ಎರಡು ಗುಂಪುಗಳ ನಡುವೆ ನಡೆದ ಹೊಡೆದಾಟ, ಗುಂಪಿನ ಸದಸ್ಯರು ಗಾಯಾಳುಗಳಾಗಿ ಆಸ್ಪತ್ರೆಗೆ ಸೇರಿದರೂ ಅಲ್ಲಿಯೂ ಮುಂದುವರಿದು, ಆಸ್ಪತ್ರೆಯ ವಾರ್ಡ್​ನೊಳಗೂ ಮಾರಾಮಾರಿ ನಡೆದ ಪ್ರಸಂಗವೊಂದು ವರದಿಯಾಗಿದೆ. ಕೋಲಾರ ಜಿಲ್ಲೆಯ ಕಠಾರಿಪಾಳ್ಯದಲ್ಲಿ ಈ ಗುಂಪುಘರ್ಷಣೆ ನಡೆದಿದೆ. ಅಪರಂಜಿ ನಾರಾಯಣಸ್ವಾಮಿ ಮತ್ತು ಗಂಗಾಧರ ಎಂಬವರ ಬಣಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು, ಗುಂಪಿನ ಸದಸ್ಯರು ಹಿಗ್ಗಾಮುಗ್ಗಾ ಹೊಡೆದಾಡಿಕೊಂಡಿದ್ದಾರೆ. ಈ ಜಗಳದಲ್ಲಿ ಐವರು ಗಾಯಗೊಂಡಿದ್ದು ಅವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ದುರಂತವೆಂದರೆ ಆಸ್ಪತ್ರೆಗೆ ಸೇರಿದ ಮೇಲೂ ಈ ಹೊಡೆದಾಟ ಮುಂದುವರಿದಿದ್ದು, … Continue reading ಕಠಾರಿಪಾಳ್ಯದಲ್ಲಿ ಕಠೋರ ಹೊಡೆದಾಟ, ಐವರಿಗೆ ಗಾಯ; ಜಿಲ್ಲಾಸ್ಪತ್ರೆಯ ವಾರ್ಡ್​ನೊಳಗೂ 2 ಗುಂಪುಗಳ ಮಾರಾಮಾರಿ