ಪರಿಸರ ವಿರುದ್ಧ ಯೋಜನೆ ರೂಪಿಸಿದ್ದಲ್ಲಿ ಹೋರಾಟ: ಹರೀಶ್ ಆಚಾರ್ಯ

ಮಡಿಕೇರಿ: ಕೊಡಗಿನಲ್ಲಿ ಪರಿಸರ ವಿರುದ್ಧವಾದ ಯೋಜನೆ ರೂಪಿಸಿದರೆ ಪೀಪಲ್ಸ್ ಮೂವ್ ಮೆಂಟ್ ಫಾರ್ ಹ್ಯೂಮನ್ ರೈಟ್ಸ್‌ನಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅಧ್ಯಕ್ಷ ಹರೀಶ್ ಜಿ. ಆಚಾರ್ಯ ಎಚ್ಚರಿಸಿದ್ದಾರೆ.

ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳಪೆ ಕಾಮಗಾರಿ ನಡೆಸಿ ಜನರ ಕಣ್ಣೊರೆಸುವ ಕೆಲಸ ಜಿಲ್ಲಾಡಳಿತದಿಂದ ಆಗುತ್ತಿದೆ. ಮದೆನಾಡು ಕಳೆದ ಬಾರಿ ಸುರಿದ ಮಳೆಗೆ ಕುಸಿದ ರಸ್ತೆಗಳಿಗೆ ಇನ್ನು ಶಾಶ್ವತ ತಡೆಗೋಡೆ ನಿರ್ಮಿಸಿಲ್ಲ ಎಂದು ಗುರುವಾರ ಸುದ್ದಿಗೋಷ್ಟಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಪರಿಹಾರಕ್ಕಾಗಿ ಕೋಟಿ ಕೋಟಿ ಹಣ ಬಂದಿದೆ. ಆದರೆ ಅದು ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದ ಅವರು, ಮಾನವ ಹಕ್ಕುಗಳನ್ನು ಅರ್ಥ ಮಾಡಿಕೊಂಡು ಮೂಲ ಸೌಲಭ್ಯ ಕಲ್ಪಿಸಬೇಕು. ಕಳಪೆ‌ ಕಾಮಗಾರಿಯಿಂದ‌ ಜನರಿಗೆ ತೊಂದರೆಯಾದರೆ ಅಧಿಕಾರಿಗಳೇ ಕಾರಣ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಮೇವಡ ಅಪ್ಪಣ್ಣ, ಕೋಳಿಬೈಲು ಜಯರಾಮ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *