More

    ಶೀಘ್ರದಲ್ಲೇ ವಾಟ್ಸ್​ಆ್ಯಪ್​ನಲ್ಲಿ ಬರಲಿವೆ ಹಲವು ಹೊಸ ವೈಶಿಷ್ಟ್ಯಗಳು

    ದೆಹಲಿ: ಬಳಕೆದಾರರ ಉತ್ತಮ ಅನುಭವಕ್ಕಾಗಿ ವಾಟ್ಸ್​ಆ್ಯಪ್​ ಹೊಸ ಫೀಚರ್​​​ಗಳನ್ನು ಪರಿಚಯಿಸುತ್ತಲೇ ಇದೆ. ಹಲವು ದಿನಗಳ ಹಿಂದೆ ಕಳುಹಿಸಿದ ಮೇಸೆಜ್​ನ್ನು 15 ನಿಮಿಷದೊಳಗಾಗಿ ತಿದ್ದುಪಡಿ ಮಾಡುವ ಫೀಚರ್​​ನ್ನು ನೀಡಿತ್ತು. ತನ್ನ ಬಳಕೆದಾರರಿಗೆ ಯಾವಾಗಲೂ ಹಲವು ಹೊಸ ಫೀಚರ್​ಗಳನ್ನು ನೀಡುವ ವಾಟ್ಸ್​ಆ್ಯಪ್ ಮತ್ತಷ್ಟು ಫೀಚರ್​ಗಳನ್ನು ನೀಡಲು ಮುಂದಾಗಿದೆ.

    ಪಾಸ್‌ವರ್ಡ್ ರಿಮೈಂಡರ್ ವೈಶಿಷ್ಟ್ಯ: ಬಳಕೆದಾರರಿಗೆ ಪಾಸ್‌ವರ್ಡ್ ರಿಮೈಂಡರ್ ಎಂಬ ಫೀಚರ್​​ ನೀಡಲು ವಾಟ್ಸ್​ಆ್ಯಪ್ ಯೋಚಿಸುತ್ತಿದೆ. ವೈಯಕ್ತಿಕ ಪಾಸ್‌ವರ್ಡ್ ಅಥವಾ 64-ಅಂಕಿಯ ಎನ್‌ಕ್ರಿಪ್ಟನ್ ಕೀಯನ್ನು ಆರಿಸುವ ಮೂಲಕ, ಬಳಕೆದಾರರು ತಮ್ಮ ಬ್ಯಾಕ್‌ಅಪ್‌ಗಳನ್ನು ಎಂಡ್-ಟು-ಎಂಡ್ ಎನ್‌ಕ್ರಿನ್‌ನೊಂದಿಗೆ ಸುರಕ್ಷಿತಗೊಳಿಸಬಹುದಾಗಿದೆ.

    ಇದನ್ನೂ ಓದಿ: ಹನಗೋಡು ಸುತ್ತಮುತ್ತ ಬಿರುಗಾಳಿ ಸಹಿತ ಮಳೆ

    ಸ್ಕ್ರೀನ್​ ಶೇರಿಂಗ್​: ವಾಟ್ಸಾಪ್ ಹೊಸ ಸ್ಕ್ರೀನ್ ಶೇರಿಂಗ್ ಫೀಚರ್​ನ್ನು ಪರಿಚಯಿಸುತ್ತಿದ್ದು, ವೀಡಿಯೊ ಕರೆಗಳ ಸಮಯದಲ್ಲಿ ಬಳಕೆದಾರರು ತಮ್ಮ ಪರದೆಯನ್ನು ಹಂಚಿಕೊಳ್ಳಲು ಇದು ಅನುವು ಮಾಡಿಕೊಡುತ್ತದೆ.

    ಮರುವಿನ್ಯಾಸಗೊಳಿಸಲಾದ ಸೆಟ್ಟಿಂಗ್‌ ಪುಟ: ಮೆಟಾ-ಮಾಲೀಕತ್ವದ ವಾಟ್ಸ್​ಆ್ಯಪ್, ಆ್ಯಂಡ್ರಾಯ್ಡ್​ ಬಳಕೆದಾರರಿಗೆ ಹೊಸ ಸೆಟ್ಟಿಂಗ್‌ಗಳ ಇಂಟರ್​ಫೇಸ್​ನ್ನು ಅಭಿವೃದ್ಧಿಪಡಿಸುತ್ತಿದ್ದು ಈ ವೈಶಿಷ್ಟ್ಯವು ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಇದು ಪ್ರೊಫೈಲ್, ಗೌಪ್ಯತೆ(privacy) ಮತ್ತು ಸಂಪರ್ಕಗಳು(contacts) ಎಂಬ ಮೂರು ಹೊಸ ಪ್ರೊಫೈಲ್ ಶಾರ್ಟ್‌ಕಟ್‌ಗಳನ್ನು ಪರಿಚಯಿಸುತ್ತದೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಲೈಕ್ಸ್​, ವ್ಯೂವ್ಸ್​​ಗಾಗಿ ಟ್ರಾಫಿಕ್​ ಸಿಗ್ನಲ್​ನಲ್ಲಿ ಸ್ನಾನ ಮಾಡಿದ ಯುವಕ!

    ವಾಟ್ಸಾ​ಆ್ಯಪ್ ಚಾನೆಲ್: ವಾಟ್ಸಾ​ಆ್ಯಪ್ ಸ್ಟೇಟಸ್ ಟ್ಯಾಬ್​ನ್ನು ಚಾನೆಲ್‌ಗಳ ‘ಅಪ್‌ಡೇಟ್‌ಗಳು’ ಎಂದು ಮರುಹೆಸರಿಸಲು ಯೋಜಿಸಿದೆ. ಈ ವಿಭಾಗದಲ್ಲಿ ವಾಟ್ಸಾ​ಆ್ಯಪ್ ಚಾನೆಲ್‌ಗಳನ್ನು ಪಟ್ಟಿ ಮಾಡಲಾಗುತ್ತದೆ. ಚಾನೆಲ್‌ಗೆ ಸೇರುವ ಫೋನ್ ಸಂಖ್ಯೆಗಳು ಮತ್ತು ಬಳಕೆದಾರರ ಮಾಹಿತಿಯನ್ನು ಯಾವಾಗಲೂ ಮರೆಮಾಡಲಾಗುವ ಫೀಚರ್​ನ್ನು ಒದಗಿಸಲು ಯೋಚಿಸುತ್ತಿದೆ.

    ಯೂಸರ್ ನೇಮ್ ವೈಶಿಷ್ಟ್ಯ: ವಾಟ್ಸ್​ಆ್ಯಪ್ ಬಳಕೆದಾರರು ತಮ್ಮ ಖಾತೆಗಳಿಗೆ ವಿಶಿಷ್ಟವಾದ ಯೂಸರ್ ನೇಮ್ ಆಯ್ಕೆ ಮಾಡಲು ಅನುವು ಮಾಡಿಕೊಡುವ ಯೂಸರ್ ನೇಮ್ ಫೀಚರ್​ನ್ನು ಒದಗಿಸಲು ಮುಂದಾಗಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts