ಸಿರವಾರ: ದೀಪ ಬೆಳಗಿಸುವ ಮೂಲಕ ಜಗದ ಕತ್ತಲು ಕಳೆದು ಬೆಳಕಿನೆಡೆಗೆ ಸಾಗೋಣ. ಮನೆ-ಮನದಲ್ಲಿ ದೀಪ ಬೆಳಗಿಸುವ ಕೆಲಸ ಮಾಡಬೇಕು ಎಂದು ನವಲಕಲ್ ಬೃಹನ್ಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಸಜ್ಜಲಶ್ರೀ ಶರಣಮ್ಮ ಆಶ್ರಮದಲ್ಲಿ ವೀರ ಸಾವರ್ಕರ್ ಯುವ ಸೇನೆ ಪ್ರತಿಷ್ಠಾಪನೆಯಿಂದ ಆಯೋಜಿಸಿದ್ದ ಗಣೇಶ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ದೀಪದ ಬೆಳಕಿನಿಂದ ನಮ್ಮಲ್ಲಿರುವ ಅಂಧಕಾರವನ್ನು ದೂರ ಮಾಡಬೇಕು. ಹಿಂದು ಸಂಪ್ರದಾಯದಂತೆ ಪ್ರತಿಯೊಂದು ಹಬ್ಬಕೂ ತನ್ನದೇಯಾದ ವಿಶೇಷ ಇದೆ. ಈ ಮಾಹಿತಿ ಅರಿತು ಹಬ್ಬ- ಹರಿದಿನಗಳನ್ನು ಆಚರಣೆ ಮಾಡುತ್ತ ಸಂಪ್ರದಾಯವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಹೇಳಿದರು.
ಪ್ರಮುಖರಾದ ಪ್ರಕಾಶ ಪಾಟೀಲ್, ಸಂದೀಪ್ ಪಾಟೀಲ್, ಡಿ.ಯಮನೂರು, ಯಲ್ಲಪ್ಪ ದೊರೆ ಇತರರಿದ್ದರು. ಬೆಳಗ್ಗೆ ಮಹಾಗಣ ಹೋಮ ನಡೆಸಲಾಯಿತು.