More

    ಆಗಾಗ ಕಾಡುವ ಆಯಾಸವನ್ನು ದೂರ ಮಾಡುತ್ತದೆ ಈ ನೈಸರ್ಗಿಕ ಪಾನೀಯಗಳು

    ಬೆಂಗಳೂರು: ಇಂದಿನ ದಿನಮಾನಗಳಲ್ಲಿ ಹೊರಗಡೆ ಸ್ವಲ್ಪ ಹೋದರೂ ಸಾಕು ನೆತ್ತಿಯ ಮೇಲಿನ ಉರಿ ಬಿಸಿಲಿನಿಂದಾಗಿ ಬೇಗನೆ ಆಯಾಸವಾಗಿ ದಣಿದು ಬಿಡುತ್ತೇವೆ. ದೇಹದಲ್ಲಿನ ನೀರು ಬೆವರು ಮತ್ತು ಮತ್ತೊಂದು ರೂಪದಲ್ಲಿ ಹೊರ ಹೋಗುತ್ತದೆ. ಇದರಿಂದಾಗಿ ಬೇಗನೆ ಸುಸ್ತಾಗಿ ಬಿಡುತ್ತೇವೆ. ಈ ಸುಸ್ತು ಹೋಗಲಾಡಿಸಲು ತಂಪು ಪಾನೀಯಗಳನ್ನು ಕುಡಿಯಬೇಕೆನಿಸುತ್ತದೆ. ಆದರೆ ಇವು ಆರೋಗ್ಯಕ್ಕೆ ಮಾರಕ ಎನ್ನುವುದನ್ನು ಮರೆಯಬಾರದು. ಇವುಗಳ ಬದಲಾಗಿ ನಾವು ನೈಸರ್ಗಿಕವಾಗಿ ಸಿಗುವ ಪಾನೀಯಗಳನ್ನು ಕುಡಿಯಬಹುದಾಗಿದೆ.

    ಇದನ್ನೂ ಓದಿ: ಕೆ.ಆರ್.ಪೇಟೆ ಕ್ಷೇತ್ರದ ನಾಗರಿಕರ ಹಿತಕಾಯಲು ಬದ್ಧ

    ಎಳನೀರನ್ನು ವಾರದಲ್ಲಿ 3-4 ಬಾರಿ ಕುಡಿಯುವುದರಿಂದ ದೇಹವನ್ನು ತಂಪಾಗಿಡುವುದರ ಜತೆಗೆ ದೇಹದ ಆಯಾಸ ಮತ್ತು ಉಷ್ಣತೆಯನ್ನು ಹದ್ದುಬಸ್ತಿನಲ್ಲಿಡಬಹುದು. ಸ್ವಲ್ಪ ಹಿಮಾಲಯನ್ ಉಪ್ಪು, ಅರ್ಧ ನಿಂಬೆ ರಸವನ್ನು ಒಂದು ಲೋಟ ನೀರಿಗೆ ಸೇರಿಸಿ ಕುಡಿಯುವುದರಿಂದ ಸುಸ್ತಾಗುವುದನ್ನು ನಿಯಂತ್ರಣದಲ್ಲಿಡಬಹುದು.

    ದೇಹವನ್ನು ನಿರ್ಜಲೀಕರಣ ಸಮಸ್ಯೆಯಿಂದ ಕಾಪಾಡುವಲ್ಲಿ ಕಬ್ಬಿನಹಾಲು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಕಬ್ಬಿನಹಾಲಿನಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆತು ದಣಿವು ಮತ್ತು ಆಯಾಸ ದೂರವಾಗುತ್ತದೆ.

    ಬಿಸಿಲಿನ ದಿನಗಳಲ್ಲಿ ನಿರ್ಜಲೀಕರಣ ಉಂಟಾಗುವುದರಿಂದ ನಿಂಬೆ ಪಾನಕ ದೇಹಕ್ಕೆ ಅತ್ಯತ್ತಮ ಪಾನೀಯವಾಗಿದೆ. ಇದು ದೇಹವನ್ನು ತಂಪಾಗಿಡುವುದರ ಜತೆಗೆ ದೈಹಿಕ ಆಯಾಸವನ್ನು ದೂರ ಮಾಡುತ್ತದೆ. ಇದರ ಜತೆಗೆ ರಾಗಿ ಅಂಬಲಿ, ಮಜ್ಜಿಗೆ ಸೇವನೆಯಿಂದ ದೇಹವನ್ನು ನಿರ್ಜಲೀಕರಣದಿಂದ ಕಾಪಾಡಬಹುದಾಗಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts