Alcohol Addiction: ಪತಿಯ ಮದ್ಯದ ಚಟದಿಂದ ಬೇಸತ್ತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಶನಿವಾರ (ಜೂ.14) ನಡೆದಿದೆ.
ಆತ್ಮಹತ್ಯೆಗೆ ಶರಣಾದ ಮಹಿಳೆ 24 ವರ್ಷದ ಮೇಂಕಾ ಸುಭಾಷ್ ಮುಕ್ನೆ. ಇವಳು ಅಂಬರ್ನಾಥ್ ಪಟ್ಟಣದ ಬಾರ್ಕುಪಾದ ಪ್ರದೇಶದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: BY Vijayendra | ದೇಶದ ಜನತೆಗೆ ದಿಟ್ಟ ನಾಯಕತ್ವವನ್ನು ಮೋದಿಜಿ ನೀಡಿದ್ದಾರೆ
ಪತಿಯ ಮದ್ಯದ ಚಟದಿಂದ ಅಸಮಾಧಾನಗೊಂಡಿದ್ದ ಮೇಂಕಾ ಸುಭಾಷ್ ಮುಕ್ನೆ ಗುರುವಾರ ರಾತ್ರಿ ಮನೆಯ ಚಾವಣಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)
‘ಟಾಟಾಗೆ 2 ಕೋಟಿ ರೂ. ಕೊಡುತ್ತೇನೆ, ನನ್ನ ತಂದೆಯನ್ನು ವಾಪಸ್ ಕೊಡಿ’ ಕಣ್ಣೀರಿಟ್ಟ ಮಗಳು..daughter