More

    ಫೆ.1,2ಕ್ಕೆ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನ, ಜಾನಪದ ಸಾಹಿತಿ ಶಂಭು ಬಳಿಗಾರರಿಂದ ಉದ್ಘಾಟನೆ

    ಬಳ್ಳಾರಿ: ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಫೆ.1 ಹಾಗೂ 2ರಂದು 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ.

    ಫೆ.1ರಂದು ಬೆಳಗ್ಗೆ 8.30ಕ್ಕೆ ರಂಗಮಂದಿರದ ಆವರಣದಲ್ಲಿ ರಾಷ್ಟ್ರ, ನಾಡ ಹಾಗೂ ಕಸಾಪ ಧ್ವಜಾರೋಹಣ ನಡೆಯಲಿದೆ. 9ಕ್ಕೆ ಕನ್ನಡ ಭವನದಿಂದ ಜಾನಪದ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷ ಡಾ.ಜೆ.ಎಂ.ನಾಗಯ್ಯ ನೇತೃತ್ವದಲ್ಲಿ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಆಯೋಜಿಸಲಾಗಿದೆ. ಶಾಸಕ ಜಿ.ಸೋಮಶೇಖರರೆಡ್ಡಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11.30ಕ್ಕೆ ಜಾನಪದ ಸಾಹಿತಿ ಶಂಭು ಬಳಿಗಾರ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಬುಧವಾರ ನಗರದ ಕನ್ನಡ ಭವನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ತಿಳಿಸಿದರು.

    ಎಮ್ಮಿಗನೂರಿನ ಹಂಪಿ ಸಾವಿರ ದೇವರಮಠದ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಸಂಡೂರು ವಿರಕ್ತಮಠದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಗಡಿನುಡಿ ಸ್ಮರಣೆ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಮಧ್ಯಾಹ್ನ 1ಕ್ಕೆ ಸಮಕಾಲೀನ ಸಾಹಿತ್ಯದ ನಿಲುವುಗಳು, 2.30ಕ್ಕೆ ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಅಸ್ಮಿತೆ ಕುರಿತು ವಿಚಾರಗೋಷ್ಠಿ, ಸಂಜೆ 4.15ಕ್ಕೆ ಕರ್ನಾಟಕ ಏಕೀಕರಣದಲ್ಲಿ ಬಳ್ಳಾರಿಯ ಪಾತ್ರ, ಗಡಿನಾಡ ಸ್ಥಿತಿಗತಿ, 371 ಜೆ ಸೌಲಭ್ಯ ಮತ್ತು ಅನುಷ್ಠಾನ ಕುರಿತು ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.

    ಕಸಾಪ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರಾದ ಸಿದ್ಮಲ್ ಮಂಜುನಾಥ, ಕಪ್ಪಗಲ್ಲು ಚಂದ್ರಶೇಖರ ಆಚಾರ್, ರಮೇಶಗೌಡ ಪಾಟೀಲ್, ಸುಂಕಪ್ಪ, ವಿಭೂತಿ ಎರ‌್ರಿಸ್ವಾಮಿ, ಮುಂಡಾಸದ ಮಲ್ಲಿಕಾರ್ಜುನ, ಕೆ.ರಮೇಶ, ಜೋಳದರಾಶಿ ಮಂಜುನಾಥ, ಕೇದಾರನಾಥ, ಟಿ.ಎಂ.ಪಂಪಾಪತಿ ಹಾಜರಿದ್ದರು.

    ಫೆ.2ರಂದು ಬೆಳಗ್ಗೆ 10ಕ್ಕೆ ವಿದ್ಯಾರ್ಥಿ ಕವಿಗೋಷ್ಠಿ, 11.30ಕ್ಕೆ ಕೃಷಿ ಮತ್ತು ಕೈಗಾರಿಕೆ ವಿಚಾರಗೋಷ್ಠಿ, ಮಧ್ಯಾಹ್ನ 1ಕ್ಕೆ ಕವಿಗೋಷ್ಠಿ, 3ಕ್ಕೆ ಸಮ್ಮೇಳನಾಧ್ಯಕ್ಷ ಜೆ.ಎಂ.ನಾಗಯ್ಯ ಅವರೊಂದಿಗೆ ಸಂವಾದ, ಸಂಜೆ 4ಕ್ಕೆ ಬಹಿರಂಗ ಅಧಿವೇಶನ, 4.30ಕ್ಕೆ ಸನ್ಮಾನ ಹಾಗೂ ಸಮಾರೋಪ ಆಯೋಜಿಸಲಾಗಿದೆ. ಸಮಾರೋಪದ ಸಾನ್ನಿಧ್ಯವನ್ನು ಕಲ್ಯಾಣಸ್ವಾಮಿ ಮಠದ ಕಲ್ಯಾಣ ಸ್ವಾಮೀಜಿ ವಹಿಸಲಿದ್ದಾರೆ. ಐಜಿಪಿ ಎಂ.ನಂಜುಂಡಸ್ವಾಮಿ ಸಮಾರೋಪ ಭಾಷಣ ಮಾಡಲಿದ್ದಾರೆ.
    | ಸಿದ್ದರಾಮ ಕಲ್ಮಠ ಅಧ್ಯಕ್ಷ, ಕಸಾಪ ಜಿಲ್ಲಾ ಘಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts