ಎಫ್​ಸಿಐನ ವಿವಿಧ ವಲಯಗಳಲ್ಲಿ 4,103 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಫುಡ್ ಕಾರ್ಪೋರೇಷನ್ ಆಫ್​ ಇಂಡಿಯಾ(ಎಫ್​ಸಿಐ) ದ ವಿವಿಧ ವಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

ಎಫ್​ಸಿಐನ ಜೂನಿಯರ್ ಇಂಜಿನಿಯರ್ (ಸಿವಿಲ್ / ಇಲೆಕ್ಟ್ರಿಕಲ್/ ಮೆಕಾನಿಕಲ್ ಇಂಜಿನಿಯರಿಂಗ್), ಅಸಿಸ್ಟೆಂಟ್ ಗ್ರೇಡ್ -2 (ಎಜಿ 2) (ಹಿಂದಿ), ಸ್ಟೆನೋ ಗ್ರೇಡ್ 2, ಟೈಪಿಸ್ಟ್ (ಹಿಂದಿ), ಅಸಿಸ್ಟೆಂಟ್ ಗ್ರೇಡ್ 3 (ಎಜಿ ಗ್ರೇಡ್ 3) (ಜನರಲ್ / ಅಕೌಂಟ್ಸ್/ ಟೆಕ್ನಿಕಲ್/ ಡಿಪೋ) ಸೇರಿ ಒಟ್ಟು 4,103 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಎರಡು ಹಂತದ ಆನ್‌ಲೈನ್ ಪರೀಕ್ಷೆ, ಕೌಶಲ ಪರೀಕ್ಷೆ, ದಾಖಲಾತಿ ಪರಿಶೀಲನೆ ನಡೆಸಲಾಗುತ್ತದೆ. 2019ರ ಮಾರ್ಚ್/ ಏಪ್ರಿಲ್ / ಮೇ ತಿಂಗಳಲ್ಲಿ ಆನ್‌ಲೈನ್ ಪರೀಕ್ಷೆ ನಡೆಯಲಿದೆ.

  • ಆನ್‌ಲೈನ್ ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಗೆ ಆರಂಭ ದಿನಾಂಕ: ಫೆಬ್ರವರಿ 23
  • ಅರ್ಜಿ ಹಾಗೂ ಶುಲ್ಕ ಪಾವತಿಗೆ ಕೊನೇ ದಿನಾಂಕ: ಮಾರ್ಚ್ 25

One Reply to “ಎಫ್​ಸಿಐನ ವಿವಿಧ ವಲಯಗಳಲ್ಲಿ 4,103 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ”

Comments are closed.