More

    ಕೋವಿಡ್​ನಿಂದ ಗುಣವಾದ ಅಪ್ಪ, ಕೇಕ್​ ಕತ್ತರಿಸಿ ಸಂತಸಪಟ್ಟ ಮಗಳು; ಎಡಿಜಿಪಿ@ಲೋಕಾಭಿರಾಮ!

    ಬೆಂಗಳೂರು: ಅದೆಷ್ಟೋ ಮಂದಿ ಕೋವಿಡ್​-19 ಪಾಸಿಟಿವ್​ ದೃಢಪಟ್ಟ ತಕ್ಷಣ ನೆಗೆಟಿವ್​ ಆಗಿ ಯೋಚಿಸುವುದೇ ಜಾಸ್ತಿ. ಹಾಗಂತ ಕೋವಿಡ್​-19 ಪಾಸಿಟಿವ್​ ವರದಿ ಬಂದು ದೃಢಪಟ್ಟ ಮೇಲೂ ಅದನ್ನು ನೆಗೆಟಿವ್​ ಆಗಿ ತೆಗೆದುಕೊಳ್ಳದೆ ಪಾಸಿಟಿವ್ ಅಪ್ರೋಚ್​ನಿಂದ ಪರಿಸ್ಥಿತಿ ಎದುರಿಸಿದವರಿಗೇನೂ ಕಡಿಮೆ ಇಲ್ಲ. ಅಂಥವರ ಪಟ್ಟಿಗೆ ಈಗ ಹಿರಿಯ ಪೊಲೀಸ್​ ಅಧಿಕಾರಿ, ಕೆಎಸ್​ಆರ್​ಪಿ ಎಡಿಜಿಪಿ ಅಲೋಕ್​ ಕುಮಾರ್ ಕೂಡ ಸೇರಿದ್ದಾರೆ.

    ಕೋವಿಡ್​-19 ಪಾಸಿಟಿವ್ ದೃಢಪಟ್ಟಿದ್ದನ್ನು ಡಿ. 9ರಂದು ಟ್ವಿಟರ್​ ಮೂಲಕ ಅವರು ಹಂಚಿಕೊಂಡಿದ್ದರು. ಕೋವಿಡ್ ಸೋಂಕು ಕೊನೆಗೆ ನನಗೂ ತಗುಲಿದೆ. ಕೋವಿಡ್​ ಪಾಸಿಟಿವಿಟಿಯನ್ನು ಪಾಸಿಟಿವ್ ಅಪ್ರೋಚ್​ನಿಂದಲೇ ಸ್ವೀಕರಿಸಲು ಪ್ರಯತ್ನಿಸುತ್ತೇನೆ. ಸಿಹಿ-ಕಹಿ ಅನುಭವಗಳ ಗುಚ್ಛವೇ ಜೀವನ ಎಂದು ಹೇಳಿಕೊಂಡಿದ್ದ ಅವರು ಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಮತ್ತೊಮ್ಮೆ ಪರೀಕ್ಷಿಸಿಕೊಂಡು ಕೋವಿಡ್​-19 ನೆಗೆಟಿವ್ ಬಂದಿದ್ದು, ಸೋಂಕುಮುಕ್ತಗೊಂಡ ಹಿನ್ನೆಲೆಯಲ್ಲಿ ಅವರು ಸಂತೋಷ ಪಟ್ಟಿದ್ದಾರೆ. ಆ ಸಂತೋಷವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಜತೆಗೆ ಸಾರ್ವಜನಿಕರಿಗೆ ಮುನ್ನೆಚ್ಚರಿಕೆಯ ಸಂದೇಶವನ್ನೂ ಸಾರಿದ್ದಾರೆ.

    ಕೋವಿಡ್​ ಚಿಕಿತ್ಸೆ ಪಡೆದ ಬಳಿಕ ಅತ್ಯಾಪ್ತರೊಂದಿಗೆ ಮತ್ತೆ ಸಮಯ ಕಳೆಯಲು ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗುತ್ತಿದೆ. ಬಹುಶಃ ಮಂಗಳವಾರ ಮತ್ತೆ ಕರ್ತವ್ಯಕ್ಕೆ ಹಿಂದಿರುಗುತ್ತೇನೆ ಎಂದು ಅಲೋಕ್​ ಕುಮಾರ್ ಹೇಳಿಕೊಂಡಿದ್ದಾರೆ. ಜತೆಗೆ, ಲಸಿಕೆ ಬಂದು ನೀವು ಅದನ್ನು ತೆಗೆದುಕೊಳ್ಳುವವರೆಗೂ ಆ ಕುರಿತ ಮುನ್ನೆಚ್ಚರಿಕೆಗಳನ್ನು ನಿರ್ಲಕ್ಷಿಸಬೇಡಿ ಎಂದೂ ಕಿವಿಮಾತು ಹೇಳಿದ್ದಾರೆ.

    See also  ಬೆಳಗಾವಿ: ಅಕ್ರಮ ಗೋ ಸಾಗಾಟ ಮಾಡ್ತಿದ್ದ ಲಾರಿ ಚಾಲಕ, ಕ್ಲೀನರ್​ ಮೇಲೆ ಹಿಂದೂ ಕಾರ್ಯಕರ್ತರಿಂದ ಹಲ್ಲೆ!

    ಚಿಕಿತ್ಸೆ ಮುಗಿಸಿ ಮನೆಗೆ ಮರಳಿರುವ ಅಲೋಕ್​ ಕುಮಾರ್ ಲೋಕಾಭಿರಾಮವಾಗಿ ಕಾಲ ಕಳೆಯುತ್ತಿದ್ದಾರೆ. ಕೋವಿಡ್​ ನೆಗೆಟಿವ್​ ಬಂದ ಬಳಿಕವೂ ಅವರು ಪಾಸಿಟಿವ್ ಗುಂಗಿನಲ್ಲಿದ್ದಾರೆ. ಅರ್ಥಾತ್​, ಆರಾಮದ ಸಮಯವನ್ನು ಅವರು ‘ಪಾಸಿಟಿವ್ ಹೆಲ್ತ್’ ಎಂಬ ಪುಸ್ತಕ ಓದಲೂ ವಿನಿಯೋಗಿಸುತ್ತಿದ್ದಾರೆ. ಮತ್ತೊಂದೆಡೆ ಕೋವಿಡ್​ ನೆಪದಲ್ಲಾದರೂ ಮನೆಯಲ್ಲುಳಿದ ತಂದೆಯೊಂದಿಗೆ ಸಮಯ ಕಳೆಯಲು ಅವಕಾಶ ಸಿಕ್ಕಿರುವುದಕ್ಕೆ ಅವರ ಪುತ್ರಿ ಕೂಡ ಸಂತೋಷಗೊಂಡಿದ್ದಾರೆ. ಅದೇ ಖುಷಿಯಲ್ಲಿ ಕೇಕ್​ ಆರ್ಡರ್ ಮಾಡಿದ ಪುತ್ರಿ, ಅದರ ಮೇಲೆ ‘ವೆಲ್​ಕಮ್​ ಬ್ಯಾಕ್​ ಪಪ್ಪ’ ಎಂದು ಬರೆಸಿ ತರಿಸಿ ಕತ್ತರಿಸಿದ್ದಾರೆ.

    ತಿರುಪತಿಯಲ್ಲಿಲ್ಲ ಈಗ ದೊಡ್ಡೋರು-ಚಿಕ್ಕೋರು ಅನ್ನೋ ಭೇದ; 8 ತಿಂಗಳ ಬಳಿಕ ನಿರ್ಬಂಧ ತೆರವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts