More

    ಕುಡಿದ ಅಮಲಿನಲ್ಲಿ ಮಕ್ಕಳಿಗೆ ವಿಷವುಣಿಸಿ ಹತ್ಯೆಗೈದ ತಂದೆಯಿಂದ ಆತ್ಮಹತ್ಯೆಯ ನಾಟಕ

    ಕಲಬುರಗಿ: ಕುಡಿದ ಮತ್ತಿನಲ್ಲಿ ತಂದೆಯೇ ಮಕ್ಕಳಿಗೆ ವಿಷ ಕುಡಿಸಿ ಕೊಲೆ ಮಾಡಿರುವ ಘಟನೆ ಚಿಂಚೋಳಿ ತಾಲೂಕಿನ ಭೈರಂಪಳ್ಳಿ ತಾಂಡಾದಲ್ಲಿ ಶುಕ್ರವಾರ ನಸುಕಿನ ಜಾವ ನಡೆದಿದೆ.

    ಮೃತರನ್ನು ರೋಹಿತಾ ಸಂಜೀವ್ (4), ಪರ್ವಿನ್ ಸಂಜೀವ್ (3) ಎಂದು ಗುರುತಿಸಲಾಗಿದೆ. ಕುಡಿದ ಮತ್ತಿನಲ್ಲಿದ್ದ ಸಂಜೀವ್​ ಮಕ್ಕಳಿಬ್ಬರನ್ನು ಜಮೀನಿಗೆ ಕರೆದ್ಯೊಯ್ದು ವಿಷ ಕುಡಿಸಿ ಕೊಲೆ ಮಾಡಿದ್ದಾನೆ. ನಂತರ ತಾನು ವಿಷ‌ ಕುಡಿದು ಆತ್ಮಹತ್ಯೆ ನಾಟಕವಾಡಿದ್ದಾನೆ.

    ಪತ್ನಿ ಶೀಲ‌ ಶಂಕಿಸಿ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದ್ದು, ಮಿರಿಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts