ಕುಡಿದ ಮತ್ತಿನಲ್ಲಿ ವಿಷ ಕುಡಿಸಿ ಮಗಳನ್ನೇ ಕೊಂದ ತಂದೆ!

ಶಿರಸಿ: ಕುಡಿದ ಮತ್ತಿನಲ್ಲಿ ಮಗಳಿಗೆ ವಿಷ ಕುಡಿಸಿ ಹತ್ಯೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಹೆಮ್ಮಾಡಿಯಲ್ಲಿ ನಡೆದಿದೆ.

ನಯನಾ ನಾಗರಾಜ ಪೂಜಾರಿ(11) ಮೃತ ಬಾಲಕಿ.

ನಾಗರಾಜ ನಾರಾಯಣ ಪೂಜಾರಿ ಎಂಬಾತ ಹೃದಯ ಸಂಬಂಧಿ ಕಾಯಿಲೆ ಬಳಲುತ್ತಿದ್ದ ಮಗಳ ಹೆಚ್ಚಿನ ಚಿಕಿತ್ಸೆಗಾಗಿ ಹಣ ಖರ್ಚು ಮಾಡಿ ಮನನೊಂದಿದ್ದ ಎನ್ನಲಾಗಿದೆ.

ಇದಲ್ಲದೆ ಮೂರೂ ಹೆಣ್ಣು ಮಕ್ಕಳಾಗಿದೆ ಎಂದು ಹೆಂಡತಿಯೊಂದಿಗೂ ಆತ ಮನಸ್ತಾಪ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಮಕ್ಕಳು ತಾಯಿಯೊಂದಿಗೆ ಇರುವುದಾಗಿ ಹೇಳಿದ್ದರಿಂದ ಕೆರಳಿದ ತಂದೆ ರಾತ್ರಿ ಕುಡಿದ ಅಮಲಿನಲ್ಲಿ ಮಗಳಿಗೆ ವಿಷ ಕುಡಿಸಿ ಕೊಲೆಗೈದು ಪರಾರಿಯಾಗಿದ್ದಾನೆ.

ಯಲ್ಲಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)