ಬೆಂಗಳೂರು: ಕೆಲಸ ಮಾಡುತ್ತಿದ್ದ ಅಪ್ಪ ಇದ್ದಕ್ಕಿದ್ದಂತೆ ಜೋರಾಗಿ ಚೀರಿಕೊಂಡಿದ್ದಾರೆ. ಏನಾಯಿತು ಎಂದು ನೋಡಲು ಹತ್ತು ವರ್ಷದ ಮಗ, ತಂದೆಯ ಬಳಿಗೆ ಹೋಗಿದ್ದಾನೆ. ಅಷ್ಟೇ, ಕೆಲವೇ ಕ್ಷಣಗಳಲ್ಲಿ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಇಂಥದ್ದೊಂದು ಪ್ರಕರಣ ಇಂದು ಬೆಂಗಳೂರಿನ ಆರ್.ಟಿ.ನಗರದ ಸುಲ್ತಾನ್ಪಾಳ್ಯ ಬಳಿ ನಡೆದಿದೆ. ರಾಜು (36) ಮತ್ತು ಸಾಯಿ (10) ಸಾವಿಗೀಡಾದ ತಂದೆ-ಮಗ. ಇಲ್ಲಿನ ರಾಮಕೃಷ್ಣ ಅಪಾರ್ಟ್ಮೆಂಟ್ನಲ್ಲಿ ಈ ದುರಂತ ಸಂಭವಿಸಿದೆ.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ಮಲಗಿದ್ದ ವೈದ್ಯ, ಚಿಕಿತ್ಸೆ ಕೊಡಿ ಎಂದರೆ ನರ್ಸ್ಗೆ ತೋರಿಸಿ ಎಂದ, ಬಾಲಕ ಸತ್ತೇ ಹೋದ!
ಅಪಾರ್ಟ್ಮೆಂಟ್ನ ಸಂಪ್ ಸ್ವಚ್ಛಗೊಳಿಸಲು ರಾಜು ತೆರಳಿದ್ದಾಗ, ಜೊತೆಗೆ ಪುತ್ರ ಸಾಯಿ ಕೂಡ ಹೋಗಿದ್ದಾಗ. ಆಗ ರಾಜುಗೆ ಕರೆಂಟ್ ಶಾಕ್ ತಗುಲಿದೆ. ಹೀಗಾಗಿ ಆತ ಜೋರಾಗಿ ಚೀರಿಕೊಂಡಾಗ ಪುತ್ರ ಸಾಯಿ ಬಳಿಗೆ ಹೋಗಿ ನೋಡಿದ್ದ. ಆಗ ಪುತ್ರನಿಗೂ ಶಾಕ್ ತಗುಲಿದ್ದು, ಇಬ್ಬರೂ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: ವಿದೇಶದಲ್ಲಿ ಸದ್ ಮಾಡ್ತಿದಾರೆ ಸಿದ್: ಆಸ್ಟ್ರೇಲಿಯನ್ ಸಿನಿಮಾಗೆ ಕನ್ನಡಿಗನ ಸಂಗೀತ ನಿರ್ದೇಶನ
ಬೆಳಗ್ಗೆ 8 ಗಂಟೆಗೆ ಈ ಘಟನೆ ನಡೆದಿದ್ದು, ತಂದೆ-ಮಗನ ಕಳೇಬರವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ. ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಕಾಂಗ್ರೆಸ್ ಮುಖಂಡನಿಂದ ಪತ್ನಿಯ ಕೊಲೆಗೆ ಸಂಚು?; ಪತಿಗೆ ಅನೈತಿಕ ಸಂಬಂಧ, ಡ್ರಗ್ ಪೆಡ್ಲರ್ ಸಂಪರ್ಕವಿದೆ ಎಂದ ಹೆಂಡ್ತಿ
ಹೆಣ್ಣೂರಲ್ಲೇ ಹೆಣ್ಣಿಗೆ ಅನ್ಯಾಯ!; ದೂರು ನೀಡಲು ಹೋದರೆ ಲಂಚ ಕೇಳಿದ, ಮಂಚಕ್ಕೂ ಕರೆದ ಪೊಲೀಸ್ ಇನ್ಸ್ಪೆಕ್ಟರ್…