ಬೆಂಗಳೂರು: ದೇಶದ ಅತಿದೊಡ್ಡ ಆನ್ಲೈನ್ ಪೇಮೆಂಟ್ ವ್ಯವಸ್ಥೆ ಹೊಂದಿರುವ ಗೂಗಲ್ ಪೇ ಮೂಲಕ ಫಾಸ್ಟ್ಯಾಗ್ ರೀಚಾರ್ಜ್ಗೆ ಅವಕಾಶ ನೀಡಲಾಗಿದೆ. ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಅಡಿಯ ಗೂಗಲ್ ಪೇ ದೇಶಾದ್ಯಂತ 40 ಕೋಟಿಗೂ ಹೆಚ್ಚಿನ ಗ್ರಾಹಕರನ್ನು ಹೊಂದಿದ್ದು, ಇದರಲ್ಲಿ ಫಾಸ್ಟ್ಯಾಗ್ ರೀಚಾರ್ಜ್ಗೆ ಅವಕಾಶ ನೀಡಿದರೆ ಹೆಚ್ಚಿನ ಜನರಿಗೆ ಅನುಕೂಲವಾಗುತ್ತದೆ ಎಂಬ ಕಾರಣದಿಂದ ಈ ಆಯ್ಕೆ ಅಳವಡಿಸಲಾಗಿದೆ.
ಬಳಕೆ ಹೇಗೆ?: ಗೂಗಲ್ ಪೇ ಆಪ್ನಲ್ಲಿ ಬಿಲ್ ಪೇಮೆಂಟ್ ಆಪ್ಷನ್ ಕ್ಲಿಕ್ ಮಾಡಿದ ನಂತರ, ಫಾಸ್ಟ್ಯಾಗ್ ಆಯ್ಕೆ ಒತ್ತಬೇಕು. ಆಮೇಲೆ ರೂಪಿ ಆಪ್ಷನ್ ಕ್ಲಿಕ್ ಮಾಡಿ, ಫಾಸ್ಟ್ಯಾಗ್ ರೀಚಾರ್ಜ್ ಆಯ್ಕೆ ಮಾಡಬೇಕು. ನಂತರ ಅಲ್ಲಿ ಬರುವ ಬ್ಯಾಂಕ್ಗಳಲ್ಲಿ ತಾವು ಖಾತೆ ಹೊಂದಿರುವ ಬ್ಯಾಂಕ್ ಸೆಲೆಕ್ಟ್ ಮಾಡಿ, ಮೊತ್ತ ನಮೂದಿಸಬೇಕು. ನಂತರ ಗ್ರಾಹಕರು ಉಳಿದ ಬಿಲ್ ಪೇಮೆಂಟ್ ಮಾಡುವ ಮಾದರಿಯಲ್ಲೇ ರೀಚಾರ್ಜ್ ಮಾಡಿಕೊಳ್ಳಬಹುದು.