ನವದೆಹಲಿ: ವಾಹನಗಳಿಗೆ ಫಾಸ್ಟ್ಯಾಗ್ ಇಲ್ಲದಿದ್ದರೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಸೌಲಬ್ಯ ಸೀಗೋದಿಲ್ಲ…!
ಹೌದು… ಕೇಂದ್ರ ಸರ್ಕಾರ ಇಂಥದ್ದೊಂದು ನಿಯಮ ಜಾರಿಗೆ ತರಲು ಮುಂದಾಗಿದೆ. ಇದು 2021ರ ಏಪ್ರಿಲ್ನಿಂದ ಜಾರಿಗೆ ಬರಲಿದೆ.
ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸಂಚಾರವನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಜಾರಿಗೆ ತರಲಾಗಿರುವ ಎಲೆಕ್ಟ್ರಾನಿಕ್ ಶುಲ್ಕ ಪಾವತಿ ವಿಧಾನವನ್ನು ಈಗಾಗಲೇ ಕಡ್ಡಾಯಗೊಳಿಸಲಾಗಿದೆ. ಜತೆಗೆ, ಟೋಲ್ಗೆ ಸಂಬಂಧಿಸಿದ ರಿಯಾಯ್ತಿಗಳನ್ನು ಪಡೆಯಬೇಕಾದರೆ ಫಾಸ್ಟ್ಯಾಗ್ ಹೊಂದಿರಲೇಬೇಕೆಂದು ನಿಯಮ ಮಾಡಲಾಗಿದೆ.
ಇದನ್ನೂ ಓದಿ; ಕರೊನಾ; ಭಾರತದಲ್ಲಿ ಪ್ರತಿದಿನ ಸೃಷ್ಟಿಯಾಗುತ್ತಿದೆ ಒಂದು ‘ಚೀನಾ’…!
ಮೂರನೇ ವ್ಯಕ್ತಿಯ ವಿಮಾ ಸೌಲಭ್ಯವನ್ನು ಕಲ್ಪಿಸಲು ಫಾಸ್ಟ್ಯಾಗ್ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ. ಇದಕ್ಕಾಗಿ ವಿಮಾ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಾಗುತ್ತಿದೆ. ವಿಮಾ ಪ್ರಮಾಣಪತ್ರದಲ್ಲಿಯೇ ಫಾಸ್ಟ್ಯಾಗ್ ಐಡಿ ವಿವರಗಳನ್ನು ನೀಡಲಾಗುತ್ತದೆ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉದ್ದೇಶಿತ ತಿದ್ದುಪಡಿಗಾಗಿ ಸಂಬಂಧಪಟ್ಟವರಿಂದ ಸಲಹೆ ಹಾಗೂ ಆಕ್ಷೇಪಗಳನ್ನು ಆಹ್ವಾನಿಸಲಾಗಿದೆ. ಇದನ್ನು ಪರಿಗಣಿಸಿ ಅಗತ್ಯ ಮಾರ್ಪಾಡುಗಳೊಂದಿಗೆ ಕಾಯ್ದೆ ಜಾರಿಗೆ ಬರಲಿದೆ.
ಇದನ್ನೂ ಓದಿ; ವಿಮಾನದಾಚೆ ಮನುಷ್ಯ ಹಾರಾಡುತ್ತಿದ್ದುದನ್ನು ನೋಡಿದ ಪೈಲಟ್ಗಳಿಗೆ ಗಲಿಬಿಲಿ…!
ಇದಲ್ಲದೇ, 2021ರ ಜನವರಿಯಿಂದ ಅನ್ವಯವಾಗುವಂತೆ 2017ರ ಡಿಸೆಂಬರ್ಗೂ ಮುನ್ನ ಮಾರಾಟವಾದ ಎಲ್ಲ ನಾಲ್ಕು ಚಕ್ರಗಳ ವಾಹನಗಳಿಗೂ ಫಾಸ್ಟ್ಯಾಗ್ ಕಡ್ಡಾಯ ಮಾಡಲಿದೆ. ಕೇಂದ್ರ ಸರ್ಕಾರ 2017ರ ಡಿಸೆಂಬರ್ ನಂತರ ಮಾರಾಟವಾದ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಿದೆ.
ಅಕ್ಟೋಬರ್ ಅಂತ್ಯಕ್ಕೆ ಕರೊನಾ ಲಸಿಕೆ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಿ; 50 ರಾಜ್ಯಗಳಿಗೆ ಸೂಚನೆ ನೀಡಿದ್ಯಾರು?