ಗುತ್ತಲ ಪಟ್ಟಣಕ್ಕೆ ಶೀಘ್ರ ನಿರಂತರ ನೀರು

blank

ಗುತ್ತಲ: ಕಳೆದ ಹಲವು ದಶಕಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗುತ್ತಲ ಪಟ್ಟಣಕ್ಕೆ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ 40.49 ಕೋಟಿ ರೂ. ವೆಚ್ಚದಲ್ಲಿ ಒತ್ತಡಯುಕ್ತ ನೀರು ಪೂರೈಕೆಯಾಗಲಿದ್ದು, ಕಾಮಗಾರಿ ಸಿದ್ಧತೆ ಭರದಿಂದ ಸಾಗಿದೆ.

ಪ್ರತಿ 10-15 ದಿನಕ್ಕೊಮ್ಮೆ ಕುಡಿಯುವ ನೀರು ಪಡೆಯುತ್ತಿದ್ದ ಪಟ್ಟಣದ ಜನತೆಗೆ ಈ ಯೋಜನೆ ಜಾರಿ ನಂತರ ದಿನದ 24 ಗಂಟೆ ನೀರು ಪೂರೈಕೆಯಾಗಲಿದೆ. ಕಳೆದ ಮಾರ್ಚ್​ನಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. 2025ರ ನವೆಂಬರ್ ಒಳಗೆ ಯೋಜನೆ ಕಾರ್ಯಾರಂಭ ಮಾಡಬೇಕಿದೆ. ಪಪಂನ ನೂತನ ಕಟ್ಟಡದ ಬಳಿ 10 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದೆ. ಶಾಂತಿ ನಗರದ ಮೌನೇಶ್ವರ ದೇವಸ್ಥಾನದ ಬಳಿ 2.5 ಲಕ್ಷ ಲೀಟರ್, ಶಿವನಗರದಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ವಣವಾಗಲಿದೆ. ಇದರೊಂದಿಗೆ ಈಗಾಗಲೇ ಇರುವ ಪಟ್ಟಣದ ಶಾಂತಿ ನಗರದ 2 ಹಾಗೂ ಶಿವನಗರದಲ್ಲಿರುವ 2 ನೀರಿನ ಟ್ಯಾಂಕ್​ಗಳಿಂದ ಒಟ್ಟು 18 ಲಕ್ಷ ಲೀಟರ್ ನೀರು ಸಂಗ್ರಹಿಸಿ, ಪಟ್ಟಣಕ್ಕೆ ಪೂರೈಸಲಾಗುತ್ತಿದೆ.

ಪಟ್ಟಣದಲ್ಲಿ ಪ್ರಸ್ತುತ 4201 ನೀರಿನ ನಲ್ಲಿಯ ಸಂಪರ್ಕಗಳಿದ್ದು, ಮುಂದಿನ 30 ವರ್ಷಗಳ ಅಂದರೆ 2055ನೇ ಇಸ್ವಿಯವರೆಗೆ ಪಟ್ಟಣದ ಜನಸಂಖ್ಯೆಗೆ ಅನುಗುಣವಾಗಿ ಯೋಜನೆ ರೂಪಿಸಲಾಗಿದೆ. ತುಂಗಭದ್ರಾ ನದಿಯ ಸೇತುವೆ ಬಳಿಯೇ ನೂತನ ಜಾಕ್​ವೆಲ್ ನಿರ್ವಣದಿಂದ ಬೇಸಿಗೆಯಲ್ಲೂ ನೀರು ಲಭ್ಯವಾಗಲಿದೆ ಎಂದು ನಂಬಲಾಗಿದೆ. ಪ್ರಸ್ತುತ 2001ರಲ್ಲಿ ಆರಂಭವಾಗಿರುವ ಜಲ ನಿರ್ಮಲ ಯೋಜನೆಯಲ್ಲಿ ಪಟ್ಟಣಕ್ಕೆ ನೀರು ಪೂರೈಕೆಯಾಗುತ್ತಿದ್ದು, ಜನರಿಗೆ ವಿಳಂಬವಾಗಿ ದೊರೆಯುತ್ತಿದೆ.

ಅಮೃತ 2.0 ಯೋಜನೆಯಲ್ಲಿ ಜನರಿಗೆ ನಿರಂತರ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆ ಆಗಲಿದ್ದು, ಕೇಂದ್ರ ಸರ್ಕಾರ ಶೇ. 50 ರಷ್ಟು ಪಾಲುದಾರಿಕೆಯಲ್ಲಿ 17.26 ಕೋಟಿ, ರಾಜ್ಯ ಸರ್ಕಾರದ ಶೇ. 40 ಪಾಲುದಾರಿಕೆಯಲ್ಲಿ 13.80 ಕೋಟಿ ರೂ. ಹಾಗೂ ಸ್ಥಳೀಯ ಪಟ್ಟಣ ಪಂಚಾಯಿತಿಯ ಶೇ. 10 ಪಾಲುದಾರಿಕೆಯಲ್ಲಿ 9.43 ಕೋಟಿ ಸೇರಿ ಒಟ್ಟು 40.49 ಕೋಟಿ ರೂ.ಗಳಲ್ಲಿ ಯೋಜನೆಯ ಅನುಷ್ಠಾನ ನಡೆಯಲಿದೆ.

ಯೋಜನೆ ಕೈಗೆತ್ತಿಕೊಂಡಿರುವ ಗುತ್ತಿಗೆದಾರರು ಅನುಷ್ಠಾನದ ದಿನದಿಂದ 5 ವರ್ಷಗಳ ಕಾಲ ನಿರ್ವಹಣೆ ಮಾಡುತ್ತಾರೆ. ಗುತ್ತಲ ಪಟ್ಟಣ ನಿವಾಸಿಗಳ ಹಲವು ದಿನಗಳ ಬೇಡಿಕೆಯಾದ ಕುಡಿಯುವ ನೀರಿನ ಯೋಜನೆ ಶೀಘ್ರ ಅನುಷ್ಠಾನವಾಗಲಿ ಎಂಬುದು ಜನರ ಆಶಯವಾಗಿದೆ.

ಈಗಾಗಲೇ ಗುತ್ತಲದ ಐತಿಹಾಸಿಕ ದೊಡ್ಡ ಕೆರೆಯನ್ನು ಪ್ರತಿ ವರ್ಷ ತುಂಬಿಸುವ ಮೂಲಕ ಅಂತರ್ಜಲ ಮಟ್ಟ ಏರಿಕೆಯಾಗಿ ನೀರಿನ ಸಮಸ್ಯೆ ಕೊಂಚ ನಿವಾರಣೆಯಾಗಿದೆ. ಜನತೆ ಹಾಗೂ ರೈತರಿಗೆ ಇದರಿಂದ ಪ್ರಯೋಜನವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದ ಅಮೃತ 2.0 ಯೋಜನೆಯಿಂದ ಗುತ್ತಲ ಹಾಗೂ ಹಾವೇರಿ ಜನತೆಗೆ ನಿರಂತರವಾಗಿ ಕುಡಿಯುವ ನೀರು ದೊರೆಯಲಿದೆ.

| ರುದ್ರಪ್ಪ ಲಮಾಣಿ

ವಿಧಾನ ಸಭೆಯ ಉಪಾಧ್ಯಕ್ಷ

 

2025ರ ನವೆಂಬರ್ ಒಳಗೆ ಯೋಜನೆ ಪೂರ್ಣಗೊಂಡು ಪಟ್ಟಣದ ಜನತೆಗೆ ನಿರಂತರ ನೀರು ದೊರೆಯ ಬೇಕೆಂಬುದು ಯೋಜನೆಯಲ್ಲಿ ನಮೂದಿಸಲಾಗಿದೆ. ಈ ಯೋಜನೆಯಿಂದ ಜನತೆಗೆ ನದಿಯಲ್ಲಿನ ನೀರು ನಿರಂತರವಾಗಿ ದೊರೆಯಲಿದೆ.

| ಅತೀಕ್ ಸಿಂಗೋಟಿ

ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕೆಯುಡಬ್ಲ್ಯುಎಸ್ ಡಿಬಿ, ಹಾವೇರಿ

Share This Article

ಹೋಟೆಲ್​ ಸ್ಟೈಲ್​​ ಮಸಾಲಾ ವಡೆ ಮನೆಯಲ್ಲೇ ಮಾಡಿ; ಇಲ್ಲಿದೆ ಸಿಂಪಲ್​ ರೆಸಿಪಿ | Recipe

ಮಸಾಲಾ ವಡೆ ಯಾರಿಗೆ ಇಷ್ಟವಿರಲ್ಲ ಹೇಳಿ. ಆದರೆ ಮನೆಯಲ್ಲಿ ಮಾಡುವ ಕಡಲೆಬೇಳೆ ವಡೆ ಹೋಟೆಲ್​ ರುಚಿ…

ಬೇಸಿಗೆಯಲ್ಲಿ ಪುದೀನಾ ಚಹಾ ಕುಡಿಯುವುದರಿಂದ ಆಗುವ ಪ್ರಯೋಜನ ಗೊತ್ತಾ?; ಇಲ್ಲಿದೆ ಉಪಯುಕ್ತ ಮಾಹಿತಿ ’ Health Tips

ಭಾರತೀಯರ ದಿನಚರಿಯ ಪ್ರಮುಖ ಭಾಗವೆಂದರೆ ಚಹಾ. ಭಾರತದ ಪ್ರತಿಯೊಂದು ಮೂಲೆಯಲ್ಲೂ ನೀವು ಚಹಾ ಪ್ರಿಯರನ್ನು ಕಾಣಬಹುದು.…

ಕ್ಯಾನ್ಸರ್​ ಮಾತ್ರವಲ್ಲ.. ಧೂಮಪಾನದಿಂದ ಬರುವ ಅಪಾಯಕಾರಿ ಕಾಯಿಲೆಗಳಿವು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಭಾರತದಲ್ಲಿ ಧೂಮಪಾನವು ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದ್ದು, ವಿಶೇಷವಾಗಿ ಯುವಕರು ಮತ್ತು ಮಹಿಳೆಯರಲ್ಲಿ ಇದರ ಅಭ್ಯಾಸ…