More

    20ರಿಂದ ಮಕ್ಕಳು ಮಹಿಳೆಯರಿಗೆ ಫ್ಯಾಷನ್ ಶೋ

    ಹುಬ್ಬಳ್ಳಿ: ಧಾರವಾಡದ ನವ ಕರ್ನಾಟಕ ಚಲನಚಿತ್ರ ಅಕಾಡೆಮಿ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್, ಇನ್ನರ್ವ್ಹೀಲ್ ಕ್ಲಬ್, ಐಎನ್ಐಎಫ್ಡಿ, ಪರ್ಲ್ ಲೈನ್ಸ್ ಕ್ಲಬ್ ಹಾಗೂ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಅ. 20ರಿಂದ ಮೂರು ದಿನಗಳವರೆಗೆ ಮಕ್ಕಳು, ಮಹಿಳೆಯರು ಹಾಗೂ ಅಂಗವಿಕಲರಿಗೆ ಫ್ಯಾಷನ್ ಶೋ ಏರ್ಪಡಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ. ಎಂ.ಎ. ಮುಮ್ಮಿಗಟ್ಟಿ ತಿಳಿಸಿದರು.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ಐದು ವಿಭಾಗಗಳಲ್ಲಿ ಫ್ಯಾಷನ್ ಶೋ ಹಾಗೂ ಪ್ರತಿಭಾ ಪ್ರದರ್ಶನ ಸ್ಪರ್ಧೆಗಳು ನಡೆಯಲಿವೆ. ಚಿತ್ರನಟಿ ರಾಗಿಣಿ, ಜಯಪ್ರದಾ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದರು.

    ಮಕ್ಕಳ ಫ್ಯಾಷನ್ ಶೋ 6-12 ಹಾಗೂ 13-17 ವಯಸ್ಸಿನ ಮಕ್ಕಳಿಗೆ ಎರಡು ವಿಭಾಗದಲ್ಲಿ ನಡೆಯಲಿದೆ. ಮಿ ಆ್ಯಂಡ್ ಮಾಮ್ ಸ್ಪರ್ಧೆಯು ತಾಯಿ ಮತ್ತು ಮಗುವಿನ ಶೋ ಆಗಿದ್ದು, ಯುವಕ&ಯುವತಿಯರಿಗೆ ಎನ್ಕೆಎ್ಎ ಐಡಲ್ ಹಾಡುಗಳ ಸ್ಪರ್ಧೆ ಹಾಗೂ ಕ್ರೇಜಿ ಡ್ಯಾನ್ಸರ್ಸ್ ಸೀಸನ್-3 ಸ್ಪರ್ಧೆ ಜರುಗಲಿದೆ ಎಂದರು.

    ಅಂಗವಿಕಲರಿಗೆ ದಿವ್ಯಾಂಗ ಫ್ಯಾಷನ್ ಶೋ ಹಾಗೂ ಟ್ಯಾಲೆಂಟ್ ಶೋ ನಡೆಯಲಿದೆ ಎಂದರು.

    ರೋಟರಿ ಕ್ಲಬ್ನ ರೀಟಾ ಹಂಡಾ, ಯುನಿವರ್ಸಲ್ ಫಿಲ್ಮ ಮೇಕರ್ಸ್ ಕೌನ್ಸಿಲ್ ಉಪಾಧ್ಯಕ್ಷ ವಿಶ್ವನಾಥ ಪಲ್ಲೇದ, ಇನ್ನರ್ವ್ಹೀಲ್ ಕ್ಲಬ್‌ನ ಭಾರತಿ ವಾಲಿ, ಕಿಡ್ಸ್ ಲರ್ನಿಂಗ್ ಅಕಾಡೆಮಿಯ ವಾಣಿಶ್ರೀ ಮಠದ ಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts