ಸವದತ್ತಿ: ಸಮಗ್ರ ಕೃಷಿ ಬೇಸಾಯ ಪದ್ಧತಿ ಅಳವಡಿಸಿ


ಸವದತ್ತಿ:  ತಾಲೂಕಿನಲ್ಲಿ ರೈತರು ಆರ್ಥಿಕವಾಗಿ ಮುಂದೆ ಬರಬೇಕಾದರೆ ಸಮಗ್ರ ಕೃಷಿ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಶಾಸಕ ಆನಂದ ಮಾಮನಿ ಹೇಳಿದ್ದಾರೆ.

ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರದ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗಾಗಿ ಕೃಷಿ ಇಲಾಖೆಯಿಂದ ವಿವಿಧ ಸೌಲ್ಯಭಗಳನ್ನು ನೀಡುತ್ತಿವೆ. ತಾಲೂಕಿನಲ್ಲಿ ಸರ್ಕಾರ ಕೃಷಿ ಹೊಂಡಗಳನ್ನು ನಿರ್ಮಿಸಿ ಕೊಟ್ಟಿದೆ. ಆದರೆ, ಮಳೆ ಆಗುತ್ತಿಲ್ಲ, ಮಳೆ ಇಲ್ಲದರಿಂದ ಭೂಮಿಯಲ್ಲಿ ನೀರು ಇರುವುದಿಲ್ಲ, ಕೊಳವೆ ಬಾವಿ ಆಧಾರಿತ ರೈತರು ಸಹ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಶಾಸಕರಿಗೆ, ಕೃಷಿಯಲ್ಲಿ ಸಾಧನೆಗೈದ ರೈತರಿಗೆ, ಕೃಷಿ ಇಲಾಖೆ ಅಧಿಕಾರಿಗಳಿಗೆ, ಗ್ರಾಮ ಸೇವಕರಿಗೆ ಸನ್ಮಾನಿಸಲಾಯಿತು. ಬಳಿಕ ಕೃಷಿ ಇಲಾಖೆಯಿಂದ ಮಜೂರಾದ ಟ್ರ್ಯಾಕ್ಟರ್‌ಗಳನ್ನು ವಿತರಿಸಲಾಯಿತು. ಎ.ಪಿ.ಎಂ.ಸಿ. ಅಧ್ಯಕ್ಷ ಜಗದೀಶ ಹನಶಿ ಅಧ್ಯಕ್ಷತೆ ವಹಿಸಿದ್ದರು.

ಬಸವರಾಜ ಕಾರದಗಿ, ಕೃಷಿಕ ಸಮಾಜದ ಅಧ್ಯಕ್ಷ ನಿಂಗಪ್ಪ ಮೀಸಿ, ಎ.ಪಿ.ಎಂ.ಸಿ. ಉಪಾಧ್ಯಕ್ಷ ಬಿ.ಎಸ್.ಮಲ್ಲೂರ, ಜಿ.ಪಂ. ಸದಸ್ಯರಾದ ಎಂ.ಎಸ್.ಹಿರೆಕುಂಬಿ, ಫಕ್ಕಿರಪ್ಪ ಹದ್ದನ್ನವರ, ವಿದ್ಯಾರಾಣಿ ಸೊನ್ನದ, ತಾ.ಪಂ. ಸದಸ್ಯರಾದ ವಿರಭದ್ರಪ್ಪ ಪಟ್ಟಣಶೆಟ್ಟಿ , ಕಲ್ಲಪ್ಪ ಮಲ್ನಾಡ, ಕೃಷಿ ಇಲಾಖೆ ಉಪ ನಿರ್ದೇಶಕರಾದ ಸಲೀಂ ಸಂಗತ್ರಾಸ್, ಸಹಾಯಕ ನಿರ್ದೇಶಕರಾದ ಎಲ್.ಎಂ.ಹೊಸಮನಿ ಮತ್ತು ಪ್ರಗತಿಪರ ರೈತ ಸಣ್ಣಯಮನಪ್ಪ ರಾಜಾಪುರೆ, ಶಿವಾನಂದ ಮಠಪತಿ, ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿ ಡಾ.ನಂದಿನಿ ಇದ್ದರು.

Leave a Reply

Your email address will not be published. Required fields are marked *