‘ರೈತರನ್ನು ಉಳಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಟ್ವೀಟ್​ ಮಾಡಿದ ಬಾದಾಮಿ ರೈತ

ಬಾಗಲಕೋಟೆ: ಬಾದಾಮಿಯ ರೈತನೋರ್ವ, ‘ಸೇವ್​ ಫಾರ್ಮರ್​ ‘ ಎಂದು ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಎಚ್​. ಡಿ.ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿಗೆ ಟ್ವೀಟ್​ ಮಾಡಿದ್ದಾರೆ.

ಬಾದಾಮಿಯ ಮುತ್ತಲಗೇರಿ ಗ್ರಾಮದ ರೈತ ಟೋಪಣ್ಣ ಹಳ್ಳಿ ಟ್ವಿಟರ್​ನಲ್ಲಿ ನೋವು ತೋಡಿಕೊಂಡಿದ್ದಾರೆ. ರೈತರ ನೋವು ನಿಮಗೆ ಕಾಣಿಸುತ್ತಿಲ್ಲವೇ?. ಬೋರ್​ವೆಲ್​ಗೆ ಕರೆಂಟ್​ ಕೊಡಿಸಿ ಪುಣ್ಯ ಕಟ್ಟಿಕೊಳ್ಳೀ ಎಂದು ಬಾದಾಮಿ ಶಾಸಕ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿಯವರಿಗೆ ಟ್ವೀಟ್​ ಮಾಡಿದ್ದಾರೆ.

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸಿ ಆರು ತಿಂಗಳು ಕಳೆದಿದ್ದರೂ ಅಧಿಕಾರಿಗಳು ವಿದ್ಯುತ್​ ಸಂಪರ್ಕ ನೀಡಿ, ಟಿಸಿ ಅಳವಡಿಸಿಲ್ಲ ಎಂದು ವಿಡಿಯೋ ಸಮೇತ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.