ಬಸವ ತಿವಿದು ರೈತರಿಗೆ ಗಾಯ

ಸಕಲೇಶಪುರ: ತಾಲೂಕಿನ ಮೆಣಸಮಕ್ಕಿ ಗ್ರಾಮದಲ್ಲಿ ದೇವರ ಬಸವ ತಿವಿದು ರೈತರೊಬ್ಬರು ಮರಣಾಂತಿಕವಾಗಿ ಗಾಯಗೊಂಡಿದ್ದಾರೆ.

ಗ್ರಾಮದ ಶಿವಪ್ಪ(60) ಗಾಯಗೊಂಡ ರೈತರು. ಕಾಫಿ ತೋಟದಲ್ಲಿ ಕೆಲಸ ಮಾಡುವ ವೇಳೆ ಗ್ರಾಮದ ದೇವರಿಗೆ ಬಿಡಲಾಗಿದ್ದ ಬಸವ ಏಕಾಏಕಿ ದಾಳಿ ಮಾಡಿದೆ.

ಪರಿಣಾಮ ಬಲ ಭಾಗದ ತೊಡೆಗೆ ಬಸವನ ಕೊಂಬು ಹೊಕ್ಕು ಮರಣಾಂತಿಕವಾಗಿ ಗಾಯಗೊಂಡಿದ್ದು ಗಾಯಾಳುವಿಗೆ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.