ಇಂಡಿ: ಪಶು ಸಂಗೋಪನೆ ಕಷಿ ಆಧಾರಿತ ಗ್ರಾಮೀಣ ಅರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೈನುಗಾರಿಕೆ, ಕುರಿ, ಕೋಳಿ, ಮೇಕೆ ಸಾಕಣೆ ಗ್ರಾಮೀಣರಲ್ಲಿ ಸಾಂಪ್ರದಾಯಿಕವಾಗಿದ್ದರೂ ವೈಜ್ಞಾನಿಕ ಪ್ರಗತಿ ಮತ್ತು ಸುಧಾರಣೆಗಳ ಪ್ರಕ್ರಿಯೆ ಪಶು ಇಲಾಖೆ ಮುಖ್ಯ ಉದ್ದೇಶವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಪಶು ಆಸ್ಪತ್ರೆ ನೂತನ ಕಟ್ಟಡದ ಭೂಮಿಪೂಜಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಹೈನುಗಾರಿಕೆಯಲ್ಲಿ ಯುವ ಸಮುದಾಯ ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಲಚ್ಯಾಣ ಗ್ರಾಮದಲ್ಲಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದು, ಶೀಘ್ರದಲ್ಲಿ ಲೋಕಾರ್ಪಣೆಗೆ ಸಿದ್ಧವಾಗಲಿದೆ ಎಂದರು.
ಹಿರಿಯ ಪಶು ವೈದ್ಯಾಧಿಕಾರಿ ಡಾ. ರಾಜಕುಮಾರ ಅಡಕಿ ಮಾತನಾಡಿ, ಪಶು ಆಸ್ಪತ್ರೆಯಿಂದ ರೈತರಿಗೆ ಅನುಕೂಲವಾಗಲಿದೆ. ಪಶು ಇಲಾಖೆಯಿಂದ ರೈತರಿಗೆ ಸಿಗುವ ಎಲ್ಲ ಸವಲತ್ತು ನೀಡಲಾಗುವುದು ಎಂದರು.
ಅಗರಖೇಡ ವಿರಕ್ತಮಠದ ಪ್ರಭುಲಿಂಗ ಶ್ರೀಗಳು, ಪಶು ಪಾಲನಾ ಇಲಾಖೆ ಉಪನಿರ್ದೇಶಕ ಡಾ. ಅಶೋಕ ಗೊಣಸಗಿ, ತಹಸೀಲ್ದಾರ್ ಬಿ.ಎಸ್.ಕಡಕಬಾವಿ, ಅಗರಖೇಡದ ವೈದ್ಯಾಧಿಕಾರಿ ಡಾ. ಪ್ರಕಾಶ ಮಿರ್ಜಿ, ನಿವತ್ತ ಪ್ರಾಚಾರ್ಯ ಎ.ಪಿ.ಕಾಗವಾಡಕರ, ಧನರಾಜ ಮುಜಗೊಂಡ ಮಾತನಾಡಿದರು.
ಗ್ರಾಮದ ಗೌರಿಶಂಕರ ಬಾಬಳಗಾಂವ, ಹಣಮಂತ ಮುಜಗೊಂಡ, ಸುರೇಶ ವಾಲಿ, ರಾಜಶೇಖರ ಪಾಟೀಲ, ಮಲಕಣ್ಣ ಗುಬ್ಬೆವಾಡ, ರಾಜೇಶ ನದಾ, ಈರಣ್ಣ ವಾಲಿ, ಜೀತಪ್ಪ ಕಲ್ಯಾಣಿ ಮತ್ತಿತರಿದ್ದರು.