More

    ರೈತರ ಆರ್ಥಿಕ ಪ್ರಗತಿಗೆ ಹೈನೋದ್ಯಮ ಪೂರಕ

    ಉಳ್ಳಾಗಡ್ಡಿ-ಖಾನಾಪುರ: ಸಮಾಜದಲ್ಲಿ ಬದುಕುವುದರೊಂದಿಗೆ ಆರ್ಥಿಕವಾಗಿ ಸಬಲರಾಗುವಲ್ಲಿ ಹೈನೋದ್ಯಮ ಸಹಕರಿಯಾಗುವುದರೊಂದಿಗೆ ಗ್ರಾಮೀಣ ವಲಯದ ಜನರ ಜೀವನಾಡಿಯಾಗಿ ಬದುಕನ್ನು ಸ್ವಚ್ಛಂದವಾಗಿಸುವ ದಿಸೆಯಲ್ಲಿ ಹೈನುಗಾರಿಗೆ ಸಹಕಾರಿಯಾಗುತ್ತದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ವಿ.ಕತ್ತಿ ಅಭಿಪ್ರಾಯಪಟ್ಟಿದ್ದಾರೆ.

    ಸಮೀಪದ ಗವನಾಳ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಹಾಲು ಉತ್ಪಾದಕರ ಸಹಕಾರಿ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನಿಂದ ಜಿಲ್ಲೆಯಾದ್ಯಂತ ಹೈನುಗಾರಿಕೆಗೆ ಉತ್ತೇಜನ ನೀಡುವ ದಿಸೆಯಲ್ಲಿ ಇಂದು ಎರಡು ಎಮ್ಮೆ ಅಥವಾ ಎರಡು ಹಸುಗಳನ್ನು ಖರೀದಿಸಲು ಆರ್ಥಿಕ ನೆರವು ನೀಡಲಾಗುತ್ತದೆ. ಅಲ್ಲದೆ ಸ್ವ ಸಹಾಯ ಸಂಘಗಳು ಈ ಯೋಜನೆಯ ಸದುಪಯೋಗ ಪಡೆದುಕೊಂಡು ತೆಗೆದುಕೊಂಡ ಸಾಲವನ್ನು ಸಕಾಲದಲ್ಲಿ ಮರುಪಾವತಿಸಬೇಕು. ಗ್ರಾಮೀಣ ಭಾಗದ ಯುವಕರು ದುಶ್ಚಟಗಳಿಗೆ ಬಲಿಯಾಗದೆ ಸ್ವ ಉದ್ಯೋಗ ಕೈಗೊಳ್ಳುವತ್ತ ಗಮನಹರಿಸಬೇಕು ಎಂದರು. ಬೆಳಗಾವಿಯ ಕೆಎಂಎಫ್ ನಿರ್ದೇಶಕ ರಾಯಪ್ಪ ಡೂಗ, ಸಹಾಯಕ ವ್ಯವಸ್ಥಾಪಕ ಚಂದ್ರಶೇಖರ ಸಂಬಾಳ, ಎಂ.ವಿ. ಲಕ್ಕನ್ನವರ, ಎಂ.ಬಿ. ಹಗಿದಾಳ, ಜಿಪಂ ಮಾಜಿ ಸದಸ್ಯ ಬಿ.ಟಿ. ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಪಿ.ಆರ್.ನಂದಗಾವಿ, ಡಾ. ರವಿ ಚಿಟ್ನಿಸ, ಶಂಕರ ಹನಜಾನಟ್ಟಿ, ಬಸವಣ್ಣಿ ಹಿಡದುಗ್ಗಿ, ಶಿವಾನಂದ ಕುಂದಿ, ಹಾಲು ಉತ್ಪಾದಕರ ಸಂಘದ ರೋಹಿತ ಚಿಟ್ನಿಸ, ನಾರಾಯಣ ಜಡಗಿ, ಸದಾಶಿವ ಬಾಡಕರ, ಗುಂಡಪ್ಪ ಹಿಡದುಗ್ಗಿ, ತಮ್ಮಣ್ಣ ದಾದುಗೋಳ, ಆನಂದ ಹಿಡದುಗ್ಗಿ, ಚೇತನ ಹನಜಾನಟ್ಟಿ, ಕಾರ್ಯದರ್ಶಿ ಗುರುಸಿದ್ದ ಜಂಗನವರ ಹಾಗೂ ಸಂದೀಪ ಮಠಪತಿ, ಕುಮಾರ ದಾದುಗೋಳ, ಪ್ರವೀಣ ಮಿಶ್ರಕೋಟಿ, ರಾಜು ಹಿಡದುಗ್ಗಿ, ಬಸವಣ್ಣಿ ಗೋಣಿ, ಮಹಾಂತೇಶ ಹಿಡದುಗ್ಗಿ, ಕಸ್ತೂರಿ ಪಾಟೀಲ, ರೇಖಾ ಬಾಡಕರ, ಉದಯ ಸನದಿ ಇತರರು ಉಪಸ್ಥಿತರಿದ್ದರು. ಶಿವಾನಂದ ಸಣ್ಣಕ್ಕಿ ನಿರೂಪಿಸಿ, ವಂದಿಸಿದರು.

    ಯುವಕರು ಕೃಷಿಯಲ್ಲಿ ಆಸಕ್ತಿ ಹೊಂದಲಿ

    ಸಾನ್ನಿಧ್ಯ ವಹಿಸಿದ್ದ ನಿಡಸೋಸಿಯ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ನೆಮ್ಮದಿಯ ಜೀವನಕ್ಕಾಗಿ ನಗರ ಪ್ರದೇಶದ ಜನರು ಇಂದು ಹಳ್ಳಿಗಳತ್ತ ಮುಖಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಯುವಕರು ಪರಿಶ್ರಮಪಟ್ಟು ಗದ್ದೆಗಳಲ್ಲಿ ಕೆಲಸ ಮಾಡಿದರೆ ನೀವೇ ಸರ್ಕಾರಕ್ಕೆ ಸಾಲ ಕೊಡುವಷ್ಟು ಪ್ರಬಲರಾಗುವಲ್ಲಿ ಸಂಶಯವಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts