Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ರೈತರಿಗೆ ನೀರುಬಿಡಿ, ಏನೇ ಬಂದರೂ ನಾನಿದ್ದೇನೆ ಎಂದ್ರು ಎಚ್‌ಡಿಕೆ!

Thursday, 21.06.2018, 2:13 PM       No Comments

ರಾಮನಗರ: ಮಂಡ್ಯದಲ್ಲಿ ಬೆಳೆಗಳಿಗೆ ನೀರು ಬಿಡದೆ ಬೆಳೆಗಳು ಒಣಗುತ್ತಿವೆ. ಈ ವಿಚಾರ ಮಾಧ್ಯಮಗಳ ಮೂಲಕ ನನಗೆ ಗೊತ್ತಾಗಿದೆ. ಮಂಡ್ಯ ಭಾಗದಲ್ಲಿ ಬೆಳೆಗಳಿಗೆ ನೀರು ಬಿಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ತಮಿಳುನಾಡಿಗೆ ಈ ತಿಂಗಳು ಬಿಡಬೇಕಾದ ನೀರು ಬಿಟ್ಟಾಗಿದೆ. ಕಾವೇರಿ ನಿರ್ವಹಣೆ ಮಂಡಳಿ ಆದೇಶ ಬರುವವರೆಗೂ ನಾವು ಕಾಯಲು ಆಗುವುದಿಲ್ಲ. ನಮ್ಮ ರೈತರಿಗೆ ಅನುಕೂಲವಾಗುವಂತೆ ಕೆರೆ ನಾಲೆಗಳಿಗೆ ನೀರು ಬಿಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ಯಾವುದೇ ಕಾನೂನು ಸಮಸ್ಯೆ ಬಂದರೂ ನಾನು ನೋಡಿಕೊಳ್ಳುತ್ತೇನೆ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ನಮ್ಮ ರೈತರ ಹಿತ ನನಗೆ ಮುಖ್ಯ. ಜಿಲ್ಲೆಯ ಎಲ್ಲ ಇಲಾಖೆಗಳಿಗೂ ಅಧಿಕಾರಿಗಳನ್ನು ಭರ್ತಿ ಮಾಡುತ್ತೇನೆ. ಯಾವುದೇ ಟೆಕ್ನಿಕಲ್​ ಸಮಸ್ಯೆ ಬಂದ್ರೆ ನಾನು ನೋಡಿಕೊಳ್ಳುತ್ತೇನೆ. ನಾನು ಅಧಿಕಾರ ಪಡೆದು 25 ದಿನ ಮಾತ್ರ ಆಗಿದೆ. ರಾಮನಗರದಲ್ಲಿ ಮಾತ್ರ ಸಮಸ್ಯೆ ಇಲ್ಲ ಬದಲಾಗಿ ರಾಜ್ಯದ ಎಲ್ಲ ಕಡೆ ಹಲವು ಸಮಸ್ಯೆಗಳಿವೆ. ನನ್ನ ಗಮನ ಈಗ ಬಜೆಟ್ ಮಂಡನೆ ಕಡೆ ಇದೆ ಎಂದು ಹೇಳಿದರು.

ಧ್ವೇಷ ರಾಜಕಾರಣದ ವಿರುದ್ಧ ಡಿಕೆಶಿ ಹೋರಾಟ

ಸಚಿವ ಡಿ.ಕೆ.ಶಿವಕುಮಾರ್‌ಗೆ​ ಐಟಿ ನೋಟಿಸ್​ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾನೂನಿನನ್ವಯ ಹೋರಾಡಲು ಡಿಕೆಶಿ ಅವರಿಗೆ ಅವಕಾಶವಿದೆ. ದ್ವೇಷದ ರಾಜಕಾರಣ ವಿರುದ್ಧ ಅವರು ಹೋರಾಡಲಿದ್ದಾರೆ. ರಾಜೀನಾಮೆ ವಿಚಾರದ ಬಗ್ಗೆ ಚರ್ಚಿಸುವ ಅವಶ್ಯಕತೆ ಇಲ್ಲ. ಆ ಸಮಯ ಬಂದಾಗ ರಾಜೀನಾಮೆ ವಿಚಾರವಾಗಿ ಹೇಳುತ್ತೇನೆ ಎಂದರು.

Leave a Reply

Your email address will not be published. Required fields are marked *

Back To Top