ವಿಜಯಪುರ: ಕೊಲ್ಹಾರ ತಾಲೂಕಿನ ಸರ್ವೇ ನಂ. 718ರಲ್ಲಿ ಕಲ್ಲಿನ ಗಣಿಯಿಂದಾಗಿ ಸುತ್ತಮುತ್ತಲಿನ ರೈತರಿಗೆ, ಜನ ಸಾಮಾನ್ಯರಿಗೆ ಹಾಗೂ ಸಮೀಪದಲ್ಲಿನ ರಾಜ್ಯದ ಎರಡನೇ ಅತಿ ದೊಡ್ಡ ಸೇತುವೆಗೆ ಕೂಡಾ ಅನಾಹುತ ಸಂಭವಿಸಲಿದ್ದು, ಕೂಡಲೇ ಕಲ್ಲಿನ ಕ್ವಾರಿಯನ್ನು ಬಂದ್ ಮಾಡಬೇಕೆಂದು ಒತ್ತಾಯಿಸಿ ರೈತರು ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ತಾಲೂಕು ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ಇಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನು ಬ್ಲಾಸ್ಟ್ ಮಾಡುವುದರಿಂದ ಅಕ್ಕಪಕ್ಕದ ರೈತರ ಜಮೀನುಗಳಲ್ಲಿ ವಾಸಿಸುವ ಗುಡಿಸಲು ಹಾಗೂ ಮನೆಗಳ ಮೇಲೆ ಬೀಳುತ್ತಿದ್ದು, ಅದರಿಂದ ಸಾರ್ವಜನಿಕರು ಭಯದಲ್ಲಿ ಬದುಕುವಂತಾಗಿದೆ. ಕೊಲ್ಹಾರ ಬ್ರೀಜ್ ಕೂಡಾ ಸಮೀಪದಲ್ಲಿಯೇ ಇದ್ದ ಪರಿಣಾಮ ಈ ಕ್ವಾರಿಯನ್ನು ಬಂದ್ ಮಾಡಬೇಕು. ಜತೆಗೆ ಇಲ್ಲಿ ಇನ್ನೊಮ್ಮೆ ಕಲ್ಲು ಗಣಿಗಾರಿಕೆಗೆ ಯಾರಿಗೂ ಅನುಮತಿ ನೀಡಬಾರದು ಎಂದರು.
ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಕೂಡಲೇ ಸ್ಥಳಕ್ಕೆ ಕಳುಹಿಸಿ ಅಲ್ಲಿ ಆಗುಹೋಗುವ ಸಮಸ್ಯೆಗಳ ಕುರಿತು ನೈಜವಾಗಿ ಪರೀೆ ಮಾಡಬೇಕು. ಮುಂದೆ ಆಗುವ ಅನಾಹುತಗಳಿಗೆ ಎಚ್ಚೆತ್ತು ಕೂಡಲೇ ಅವುಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದರು.
ಮಲ್ಲಿಕಾರ್ಜುನ ಮಹಾಂತಮಠ, ಕಲ್ಲಪ್ಪ ಗಿಡ್ಡಪ್ಪಗೊಳ, ಶ್ರೀಶೈಲ ಸೊನ್ನದ, ಯಲ್ಲಪ್ಪ ಸೊನ್ನದ, ಶಶಿಕಾಂತ ಬಿರಾದಾರ, ಮಲ್ಲಿಕಾರ್ಜುನ ಸೊನ್ನದ, ವಿರುಪಾ ಅಥಣಿ, ಸಂಗಪ್ಪ ಅಥಣಿ, ಸಂಗಪ್ಪ ಟಕ್ಕೆ, ಮಹಾದೇವಪ್ಪ ತೇಲಿ, ಪ್ರಕಾಶ ತೇಲಿ, ರಾಮನಗೌಡ ಪಾಟೀಲ, ಪುಂಡಲಿಕ ಸೊನ್ನದ, ವಿ.ಎಂ. ಮನ್ನಿಕೇರಿ, ಹಣಮಂತ ಸೋನ್ನದ, ಮಹಾದೇವ ಕದಮ, ಸಂಗಮೆಶ ಹುಣಸಗಿ, ಸುಭಾಸ ಸಜ್ಜನ, ಜಯಸಿಂಗ ರಜಪೂತ, ಲಚ್ಚಾರುಮ ರಜಪೂತ ಮತ್ತಿತರರಿದ್ದರು.